ತಮಿಳಿನಲ್ಲಿ ಸಿನಿಮಾವಾಗುತ್ತಿದೆ ‘ ಹೆಮ್ಮೆಯ ಕನ್ನಡಿಗ ‘ ನ ಬಯೋಪಿಕ್…!

Promotion

 

ಮೈಸೂರು, ಜ.17, 2020 : (www.justkannada.in news) : ಬಹುದಿನಗಳ ನಂತರ ತಮಿಳುನಟ ಸೂರ್ಯ ಅಭಿನಯದ ಚಿತ್ರವೊಂದರ ಟೀಸರ್ ಕೆಲ ದಿನಗಳ ಹಿಂದೆ ಬಿಡುಗಡೆಗೊಂಡು ಭಾರಿ ಸದ್ದು ಮಾಡುತ್ತಿದೆ. ಇದು ಕನ್ನಡಿಗರ ಗರ್ವ ಪಡುವ ಸಂಗತಿ.
ಅರೇ, ತಮಿಳು ಸಿನಿಮಾದ ಟೀಸರ್ ಬಿಡುಗಡೆಗೂ ಕನ್ನಡಿಗರಿಗೂ ಏನ್ ಸಂಬಂಧ ಅಂಥ ಆಶ್ಚರ್ಯವಾಗುತ್ತಿದೆಯಾ..?ನಟ ಸೂರ್ಯ ಅಭಿನಯದ ಈ ಸಿನಮಾದ ಕಥೆಯ ಮೂಲವೇ ಕನ್ನಡಿಗ. ಆತನ ಸಾಧನೆಯನ್ನೇ ಆಧಾರಿಸಿ ತಯಾರಿಸಿರುವ ಸಿನಿಮಾ ‘ ಸೊರರೈ ಪೊಟ್ರು ‘ ( soorarai pottru ). ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತಿರುವವರು ಸುಧಾ ಕೊಂಗಾರ. ಕನ್ನಡದಲ್ಲಿ ಈ ಸಿನಿಮಾದ ಟೈಟಲ್ ನ  ಅರ್ಥ  ‘ ಬಿರುಗಾಳಿ’ ಅಂಥ.

ಯಾರಿದು ಕನ್ನಡಿಗ :

ಮೇಲುಕೋಟೆಯಲ್ಲಿ ಜನಿಸಿ, ಹಾಸನದಲ್ಲಿ ಬೆಳೆಯುವ ಅಪ್ಪಟ ಕನ್ನಡ ಮೀಡಿಯಂ ವಿದ್ಯಾರ್ಥಿ ಗೋಪಿನಾಥ್, ಬಳಿಕ ಕ್ಯಾಪ್ಟನ್ ಗೋಪಿನಾಥ್ ಆಗಿ ಬದಲಾಗುವ ಕಥೆ ಹಾಗೂ ಆನಂತರದ ಸಾಧನೆಯನ್ನು ಈ ಸಿನಿಮಾ ಒಳಗೊಂಡಿದೆ.
ಕನ್ನಡ ಮೀಡಿಯಂ ವಿದ್ಯಾರ್ಥಿಯಾದ ಗೋಪಿನಾಥ್, ಮಿಲಿಟರಿಗೆ ಸೇರಬೇಕು ಎಂಬ ಅಧಮ್ಯ ಆಸೆಯನ್ನು ಹೊಂದಿದ್ದ ಯುವಕ. ಆದರೆ ಮಿಲಿಟರಿ ಸೇರಲು ಅರ್ಹತೆ ಗಿಟ್ಟಿಸಲು ಎದುರಿಸಬೇಕಾಗಿದ್ದ ಪರೀಕ್ಷೆ ಸಂಪೂರ್ಣ ಇಂಗ್ಲಿಷ್ ಮಯವಾಗಿತ್ತು. ಕನ್ನಡ ಹೊರತು ಪಡಿಸಿ ಅನ್ಯ ಭಾಷೆಯ ಜ್ಞಾನವಿಲ್ಲದ ಗೋಪಿನಾಥ್ ಗೆ ಇದರಿಂದ ತೀವ್ರ ನಿರಾಸೆಯಾಗುತ್ತದೆ. ಇದನ್ನು ತನಗೆ ಪಾಠ ಮಾಡಿದ ಗುರುಗಳ ಬಳಿ ಬಂದು ಯುವಕ ಗೋಪಿನಾಥ್ ಹೇಳಿಕೊಳ್ಳುತ್ತಾನೆ.
ಈ ಘಟನೆ ಬಳಿಕ ಗೋಪಿನಾಥ್ ಗುರುಗಳು, ಕೇಂದ್ರ ರಕ್ಷಣಾ ಸಚಿವರಿಗೆ ಪತ್ರ ಬರೆದು, ಇಂಗ್ಲಿಷ್ ಭಾಷೆ ತಿಳಿಯದವರು ಮಿಲಿಟರಿಗೆ ಸೇರುವಂತಿಲ್ಲವೇ..? ಎಂಬ ಪತ್ರ ಬರೆದು ಅಸಮಧಾನ ವ್ಯಕ್ತಪಡಿಸುತ್ತಾರೆ. ಇದಾದ ಮೂರು ತಿಂಗಳಿಗೆ ಸಚಿವಾಲಾಯದಿಂದ ಮರು ಉತ್ತರ ಬರುತ್ತದೆ. ಸ್ಥಳೀಯ ಭಾಷೆಗಳಲ್ಲೂ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿರುವ ಸಿಹಿ ಸುದ್ಧಿ ಆ ಪತ್ರದಲ್ಲಿರುತ್ತದೆ.
ಈ ಅವಕಾಶ ಬಳಸಿಕೊಂಡು ಗೋಪಿನಾಥ್, ಪರೀಕ್ಷೆ ಎದುರಿಸಿ ಮಿಲಿಟರಿ ಸೇರುತ್ತಾರೆ. ಕೆಲ ವರ್ಷಗಳ ಸೇವೆಯ ಬಳಿಕ ಕ್ಯಾ.ಗೋಪಿನಾಥ್ ಆಗಿ ನಿವೃತ್ತಿ ಹೊಂದುತ್ತಾರೆ. ಆದರೆ ಈ ವೇಳೆ ಅವರಿಗೊಂದು ವಿಷಯ ಕಾಡುತ್ತಿರುತ್ತದೆ. ಅದೇನೆಂದರೆ, ವಿಮಾನಯಾನ ಕೇವಲ ಶ್ರೀಮಂತರಿಗೆ ಮಾತ್ರ ಸಿಮೀತವೇ..? ಬಡವರು ಯಾಕೆ ವಿಮಾನದಲ್ಲಿ ಪ್ರಯಾಣಿಸಬಾರದು ..? ಎಂಬುದೇ ಪ್ರಶ್ನೆ.

ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಎದುರಿಸುವ ಸಮಸ್ಯೆ, ಸವಾಲುಗಳು. ಅದನ್ನು ಮೆಟ್ಟಿನಿಂತು ‘ ಏರ್ ಡೆಕ್ಕನ್ ‘ ಆರಂಭಿಸಿ ಕೇವಲ 1 ರೂಪಾಯಿಗೆ ವಿಮಾನದಲ್ಲಿ ಸಂಚರಿಸುವ ಅವಕಾಶ ಸೃಷ್ಠಿಸಿದ್ದು ಸಿನಿಮಾದಲ್ಲಿ ಕಮರ್ಷಿಯಲ್ ಟಚ್ ನೊಂದಿಗೆ ಆಕರ್ಷಕವಾಗಿ ಮೂಡಿ ಬಂದಿರುವುದು ನಟ ಸೂರ್ಯ ಅಭಿನಯದ ‘ ಸೊರರೈ ಪೊಟ್ರು ‘ ಟೀಸರ್ ನೋಡಿದಾಗ ತಿಳಿಯುತ್ತದೆ.
ಕನ್ನಡಿಗನೊಬ್ಬನ ಜೀವನಗಾಥೆ ತಮಿಳು ಸಿನಿಮಾ ಮೂಲಕ ಅನಾವರಣಗೊಳ್ಳುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

key words : kannadiga-captan.gopinath-deccan-aviation-tamil-film-surya-soorarai pottru

proud kannadiga, deccan aviation mentor captain gopinath biopic ready to release in tamil