ಕನ್ನಡ ಶಾಲೆ ಅಳಿಸಿ ವಿವೇಕರ ಸ್ಮಾರಕ ನಿರ್ಮಾಣ ಬೇಡ- ಸರ್ಕಾರಕ್ಕೆ ಪ್ರೊ ಪಿ.ವಿ. ನಂಜರಾಜ ಅರಸ್​ ಆಗ್ರಹ…

Promotion

ಮೈಸೂರು,ಮಾರ್ಚ್,23,2021(www.justkannada.in):  ಮೈಸೂರಿನಲ್ಲಿ ವಿವೇಕಾನಂದರ ಸ್ಮಾರಕ ಜಾಗದ ವಿವಾದ ಮತ್ತೆ ಶುರುವಾಗಿದ್ದು, ಕನ್ನಡ ಶಾಲೆ ಅಳಿಸಿ, ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡೋದು ಬೇಡ ಎಂದು ಸರ್ಕಾರಕ್ಕೆ ಇತಿಹಾಸ ತಜ್ಞ ಪ್ರೊ. ಪಿ.ವಿ. ನಂಜರಾಜ ಅರಸ್​ ಆಗ್ರಹಿಸಿದ್ದಾರೆ.jk

ಈ ಕುರಿತು ಇಂದು ಮಾತನಾಡಿರುವ  ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್ , ವಿವೇಕರ ಸ್ಮಾರಕಕ್ಕಾಗಿ ರಾಮಕೃಷ್ಣಾಶ್ರಮದಿಂದ ಗೋಲ್ಮಾಲ್​ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಕನ್ನಡ ಶಾಲೆ ಶತಮಾನಕ್ಕೂ ಹಳೆಯದು. ಹೆಣ್ಣು ಮಕ್ಕಳಿಗಾಗಿ 1881ರಲ್ಲಿ ಸ್ಥಾಪಿಸಿದ ಶಾಲೆ. ವಿವೇಕಾನಂದರ ಸ್ಮಾರಕಕ್ಕೆ ನಮ್ಮ ವಿರೋಧವಿಲ್ಲ. ವಿವೇಕಾನಂದರು ಮೈಸೂರಿಗೆ ಬಂದಿದ್ದಾಗ ದಿವಾನ್​ ಶೇಷಾದ್ರಿ ಅಯ್ಯರ್​ ನಿವಾಸದಲ್ಲಿ ವಾಸ್ತವ್ಯ ಹೂಡಿದ್ರು. ನಿರಂಜನಾಶ್ರಮದಲ್ಲಿ ವಿವೇಕಾನಂದರು ಉಳಿದಿರಲಿಲ್ಲ. ರಾಮಕೃಷ್ಣಾಶ್ರಮದಿಂದ ಪ್ರಕಟಿಸಲ್ಪಟ್ಟ ಪುಸ್ತಕದಲ್ಲೇ ಈ ಸಂಗತಿ ಇದೆ. ಪುಸ್ತಕವನ್ನು ಕೋರ್ಟಿಗೆ ಸಲ್ಲಿಸುತ್ತಿದ್ದಂತೆ ಪುಸ್ತಕದಲ್ಲಿದ್ದ ವಿಚಾರವೇ ನಾಪತ್ತೆಯಾಗಿದೆ. ಹೀಗಾಗಿ ಕನ್ನಡ ಶಾಲೆ ಅಳಿಸಿ, ವಿವೇಕರ ಸ್ಮಾರಕ ನಿರ್ಮಾಣ ಬೇಡ ಎಂದು ಸರ್ಕಾರಕ್ಕೆ ಪಿ.ವಿ. ನಂಜರಾಜ ಅರಸ್​ ಆಗ್ರಹಿಸಿದ್ದಾರೆ.kannada-school-no-elaborate-swamy-vivekananda-monument-nanjaraje-aras

ಎನ್​.ಟಿ.ಎಂ.ಎಸ್. ಕನ್ನಡ ಶಾಲೆ ಸಿಎಂ ಯಡಿಯೂರಪ್ಪ ಉಳಿಸುವಂತೆ ಸೂಚಿಸಿದ್ದರು. ಆದರೆ ಸಿಎಂ ಆದೇಶ ಪರಿಪಾಲನೆ ಮಾಡದ ಆತಂಕವನ್ನ ಪಿ.ವಿ. ನಂಜರಾಜ ಅರಸ್ ವ್ಯಕ್ತಪಡಿಸಿದ್ದಾರೆ.

ಕೋರ್ಟ್​ ಆದೇಶ ಕಾದು ನೋಡಿ ಮುಂದಿನ ತೀರ್ಮಾನ- ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ…

ವಿವೇಕಾನಂದರ ಸ್ಮಾರಕ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಕನ್ನಡ ಶಾಲೆ ಉಳಿಸುವಂತೆ ಈ ಹಿಂದೆ ಸಿಎಂ ಸೂಚಿಸಿದ್ದರು. ಕನ್ನಡ ಶಾಲೆ ಜಾಗ ಕೈಬಿಟ್ಟರೆ ಸ್ಮಾರಕಕ್ಕೆ ಜಾಗ ಸಾಕಾಗಲ್ಲ ಅಂತಾ ಆಶ್ರಮದವರ ಅಭಿಪ್ರಾಯ. ಈ ವಿಚಾರದ ಬಗ್ಗೆ  ಹೈಕೋರ್ಟ್​ನಲ್ಲಿ ವಿಚಾರಣೆ ನಡೆದಿದೆ. ಕೋರ್ಟ್​ ಆದೇಶದ ಕಾದು ನೋಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

Key words: Kannada school- no elaborate-swamy vivekananda- monument- Nanjaraje aras