ಎನ್ ಇಪಿಯಲ್ಲಿ ಕಡ್ಡಾಯವಾಗಿ ಕನ್ನಡ ಇರುತ್ತೆ: ಹಿಂದಿ ಭಾಷೆ ಶಿಕ್ಷಣಕ್ಕೆ ಒತ್ತಡ ಹಾಕಲ್ಲ- ಸಚಿವ ಬಿ.ಸಿ ನಾಗೇಶ್.

ಬೆಂಗಳೂರು,ಸೆಪ್ಟಂಬರ್,17,2021(www.justkannada.in): ಎನ್ ಇಪಿಯಲ್ಲಿ ಕಡ್ಡಾಯವಾಗಿ ಕನ್ನಡ ಇರುತ್ತೆ.  ಮಾತೃಭಾಷೆ ಕನ್ನಡ ಕಡ್ಡಾಯವಾಗಿ ಇರುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.

ಈ ಕುರಿತು ಇಂದು ಮಾತನಾಢಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ಎನ್ ಇಪಿಯಲ್ಲಿ ಮಾತೃಭಾಷೆ ಕನ್ನಡ ಕಡ್ಡಾಯವಾಗಿದೆ.  ಹಿಂದಿ ಭಾಷೆ ಶಿಕ್ಷಣಕ್ಕೆ ಒತ್ತಡ ಹಾಕಲ್ಲ ಎಂದರು.

ಇನ್ನು 1 ರಿಂದ 5ನೇ ತರಗತಿ ಆರಂಭ ಕುರಿತು ಪ್ರತಿಕ್ರಿಯಿಸಿದ ಸಚಿವ ಬಿಸಿ ನಾಗೇಶ್, ತಾಂತ್ರಿ ಸಲಹಾ ಸಮಿತಿ ಸಲಹೆ ಮೇರೆಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಧಿವೇಶನ ಮುಗಿದ ಬಳಿಕ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗುತ್ತದೆ. ಸಭೆಯಲ್ಲಿ 1 ರಿಂದ 5ನೇ ತರಗತಿ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Key words: Kannada –NEP-No pressure -Hindi language -education – Minister- BC Nagesh