‘ಸಪ್ತಸಾಗರದಾಚೆ ಎಲ್ಲೋ’ಗೆ ಬಂದ ಮತ್ತೊಬ್ಬ ಸರಳ ಸುಂದರಿ !

Promotion

ಬೆಂಗಳೂರು, ಆಗಸ್ಟ್ 19, 2022 (www.justkannada.in): ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಹೊಸ ನಾಯಕಿಯ ಆಗಮನವಾಗಿದೆ!

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ತಂಡದ ಹೊಸ ಪ್ರಯತ್ನ ‘ಸಪ್ತಸಾಗರದಾಚೆ ಎಲ್ಲೋ’  ಚಿತ್ರಕ್ಕೆ ಹೊಸ ನಟಿ ಎಂಟ್ರಿ ಕೊಟ್ಟಿದ್ದಾರೆ.  ಈ ವಿಷಯವನ್ನು ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ.

ಹೇಮಂತ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೋಡಿಯಾಗಿ ರುಕ್ಮಿಣಿ ವಸಂತ್ ಬಣ್ಣ ಹಚ್ಚಿದ್ದಾರೆ. ಇದೀಗ ಇವರ ಜತೆಗೆ ಮತ್ತೊಬ್ಬ ನಟಿಯ ಆಗಮನವಾಗಿದೆ.

ಬೆಂಗಳೂರಿನ ಹುಡುಗಿ ನಾಯಕಿಯಾಗಿ ರಕ್ಷಿತ್ ಶೆಟ್ಟಿ ತಂಡಕ್ಕೆ ಆಗಮಿಸಿದ್ದಾರೆ. ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಸುರಭಿ ಪಾತ್ರಕ್ಕೆ ಚೈತ್ರಾ ಜೆ. ಆಚಾರ್ ಆಯ್ಕೆ ಆಗಿದ್ದಾರೆ.

‘ಮಹೀರ’, ‘ಆ ದೃಶ್ಯ’, ‘ತಲೆತಂಡ’ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಈಗಾಗಲೇ ಚೈತ್ರಾ ನಟಿಸಿದ್ದಾರೆ. ಸೀರೆ ಉಟ್ಟು ಮಲ್ಲಿಗೆ ಮುಡಿದ ಸುರಭಿಯ ಫಸ್ಟ್ ಲುಕ್ ಪೋಸ್ಟರ್ ಕೂಡ ರಿವೀಲ್ ಆಗಿದೆ.