‘ಬಬ್ರೂ’ ಚಿತ್ರದ ಮೊದಲ ಲಿರಿಕಲ್​ ಸಾಂಗ್ ಬಿಡುಗಡೆ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ

Promotion

ಮೈಸೂರು, ನವೆಂಬರ್ 21, 2019 (www.justkannada.in): ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಬಬ್ರೂ ಚಿತ್ರದ ಮೊದಲ ಲಿರಿಕಲ್​ ಸಾಂಗ್ ‘ಕನಸೆಲ್ಲಾ ನನಸಾಗೋ..’ ಅನ್ನು ರಿಯಲ್​ ಸ್ಟಾರ್​ ಬಿಡುಗಡೆ ಮಾಡಿದ್ದಾರೆ.

ಹೌದು. ರಿಯಲ್​ ಸ್ಟಾರ್​ ಉಪೇಂದ್ರ ಬಬ್ರೂ ಚಿತ್ರದ ‘ಕನಸೆಲ್ಲಾ ನನಸಾಗೋ..’ ಎಂಬ ಮೊದಲ ಲಿರಿಕಲ್​ ವಿಡಿಯೋ ಸಾಂಗ್​ ಬಿಡುಗಡೆ ಮಾಡಿದ್ದಾರೆ. ಭಿನ್ನ ಶೀರ್ಷಿಕೆಯ ಮೂಲಕವೇ ನಿರೀಕ್ಷೆ ಹುಟ್ಟಿಸಿರುವ ಚಿತ್ರ ಈಗ ಮತ್ತೆ ಈ ಹಾಡಿನ ಮೂಲಕ ಸುದ್ದಿಯಾಗಿದೆ.

ಅಪರಿಚಿತರ ಪಯಣದ ಪ್ರೇಮ ಕಥಾಹಂದರವನ್ನು ಒಳಗೊಂಡಿರುವ ಬಬ್ರೂ ಚಿತ್ರದ ಮೊದಲ ಗೀತೆ ಬುಧವಾರ, ನ.20 ರಂದು ಬಿಡುಗಡೆಯಾಗಿದೆ. ಸಂಪೂರ್ಣವಾಗಿ ಅಮೆರಿಕದಲ್ಲೇ ಚಿತ್ರೀಕರಣಗೊಂಡಿರುವ ಮೊಟ್ಟ ಮೊದಲ ಹಾಲಿವುಡ್​ ಕನ್ನಡ ಚಿತ್ರ ಎಂಬ ದಾಖಲೆ ಹೊಂದಿರುವ ಈ ಚಿತ್ರದ ‘ಕನಸೆಲ್ಲಾ ನನಸಾಗೋ’ ಚಿತ್ರ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸುಮನ್ ನಗರ್ ಕರ್ ಪ್ರೊಡಕ್ಷನ್ಸ್ ಹಾಗೂ ಯುಗ ಕ್ರಿಯೇಷನ್ಸ್ ನಿರ್ಮಿಸಿರುವ ಮೊದಲ ಹಾಲಿವುಡ್ ಕನ್ನಡ ಚಲನಚಿತ್ರ “ಬಬ್ರೂ” “ಕನಸೆಲ್ಲ ನನಸಾಗೋ” ಹಾಡಿನ ಸಾಹಿತ್ಯ ಲೋಕೇಶ್ ಬಿ. ಎಸ್, ಸಂಗೀತ ನಿರ್ದೇಶಕರು ಪೂರ್ಣಚಂದ್ರ ತೇಜಸ್ವಿ, ಸಂಜಿತ್ ಹೆಗ್ಡೆ ಗೀತೆ ಹಾಡಿದ್ದಾರೆ.