ಈ ವಾರ 9 ಕನ್ನಡ ಸಿನಿಮಾ ತೆರೆಗೆ : ಪ್ರೇಕ್ಷಕರು ಅಂಡ್ ಬಗ್ಗಿಸಿಕೊಂಡು ಯಾವ್ ಸಿನಿಮಾ ಅಂಥ ನೋಡೋದು ಬಾಸೂ..?

 

ಬೆಂಗಳೂರು, ಫೆ.07, 2020 : (www.justkannada.in news) : ಈ ವಾರ ಸ್ಯಾಂಡಲ್ ವುಡ್ ನಲ್ಲಿ ತೆರೆ ಕಂಡಿರುವ ಕನ್ನಡ ಸಿನಿಮಾಗಳ ಸಂಖ್ಯೆ ಒಂಬತ್ತು..!. ಸಿನಿ ಪ್ರೇಕ್ಷಕ ಯಾವ ಸಿನಿಮಾ ನೋಡಬೇಕು, ಯಾವುದನ್ನು ಬಿಡಬೇಕು..? ನೀವೆ ಹೇಳಿ.

ಈ ನಡುವೆ ಕನ್ನಡ ಸಿನಿಮಾಗಳನ್ನು ‘ ಅಂಡ್ ಬಗ್ಗಿಸಿಕೊಂಡು ನೋಡಿ ‘ ಅಂಥ ಫರ್ಮಾನು ಬೇರೆ ಹೊರಡಿಸಿದ್ದಾರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್. ಹಾಗಾಗಿ ಈಗ ದರ್ಶನ್ ಅವರೇ ಹೇಳಬೇಕು, ಕನ್ನಡ ಪ್ರೇಕ್ಷಕರು ಅಂಡ್ ಬಗ್ಗಿಸಿಕೊಂಡು ಯಾವ್ಯಾವ ಸಿನಿಮಾ ನೋಡಬೇಕು ಅನ್ನೋದನ್ನ.

challenging-star-darshan-statment-goes-viral-kannada-film-gentleman

ಹೊಸಬರ ಸಿನಿಮಾ ಬರಬೇಕು ನಿಜ. ಆದ್ರೆ ಅದಕ್ಕೂ ಒಂದು ಲೆಕ್ಕ ಬೇಡ್ವ..? ಯಾವ ಸಿನಿಮಾ, ಕಲಾವಿದರು ಯಾರು..? ಎಂಬುದೇ ತಿಳಿಯದಿದ್ದರೆ ಜನ ಯಾಕೆ ಸಿನಿಮಾ ನೋಡಲು ಬರುತ್ತಾರೆ. ವಾರದಲ್ಲಿ ಒಂದೆರೆಡು ಸಿನಿಮಾ ರಿಲೀಸ್ ಆದ್ರೆ ಹೇಗೋ ನೋಡಬಹುದು. ಚೆನ್ನಾಗಿರುವ ಸಿನಿಮಾಗಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಬಹುದು. ಆದರೆ ಹೀಗೆ ಡಜನ್ ಗಟ್ಟಲೇ ಸಿನಿಮಾ ರಿಲೀಸ್ ಆದ್ರೆ ಪ್ರೇಕ್ಷಕನ ಗತಿ ಏನು.

ಮೊದಲೇ ಕರ್ನಾಟಕದಲ್ಲಿ ಚಿತ್ರಮಂದಿರಗಳ ಸಮಸ್ಯೆ ಕಾಡುತ್ತಿದೆ. ಮಲ್ಟಿ ಪ್ಲೆಕ್ಸ್ ಸಂಸ್ಕೃತಿ ಬಂದ ಮೇಲೆ ಇರೋಬರೋ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳೆಲ್ಲಾ ಬಾಗಿಲು ಮುಚ್ಚಿ ಮದುವೆ ಮಂಟಪವೋ, ಮಾಲ್ ಗಳೋ ಆಗುತ್ತಿವೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಪರಭಾಷ ಚಿತ್ರಗಳಿಗೆ ಹೆಚ್ಚು ಮಣೆ ಹಾಕಲಾಗುತ್ತಿದೆ. ಅಂಥದ್ದರಲ್ಲಿ ಸುನಾಮಿಯಂತೆ ಇಷ್ಟೊಂದು ಚಿತ್ರ ಏಕಾಕಾಲದಲ್ಲೇ ಬಿಡುಗಡೆಗೊಳ್ಳುವುದರಿಂದ ಯಾರಿಗೆ ತಾನೆ ಲಾಭವಾಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ.

kannada-film-9-relesed-darshan-boss-karnataka

ಸಿನಿಮಾ ಮಂದಿ ಕುಳಿತು ಈ ಬಗ್ಗೆ ಚರ್ಚೆ ನಡೆಸುವುದು ಉತ್ತಮ. ಅವರೇ ಒಂದು ಸ್ವಯಂ ರೇಖೆ ಹಾಕಿಕೊಂಡು, ವಾರದಲ್ಲಿ ಇಷ್ಟೇ ಸಿನಿಮಾ ಬಿಡುಗಡೆಯಾಗುವಂತೆ ನೋಡಿಕೊಳ್ಳಬೇಕು. ಇದರಿಂದ ಅದೃಷ್ಠ ಪರೀಕ್ಷೆಗಿಳಿಯುವ ನಟರಿಗೆ, ಬಂಡವಾಳ ಹೂಡಿದ ನಿರ್ಮಾಪಕರಿಗೆ ಅನುಕೂಲವಾಗುತ್ತದೆ. ಬದಲಿಗೆ ಯಾವುದೇ ಲೆಕ್ಕಚಾರವಿಲ್ಲದೆ ಮನಸೋ ಇಚ್ಛೆ ಸಿನಿಮಾ ತಯಾರಿಸಿ ಅದನ್ನು ಒಂದೇ ದಿನ ಬಿಡುಗಡೆ ಮಾಡಿದರೆ ಹಣ ಹೂಡಿದನಿಗೆ ನಷ್ಟ ಕಟ್ಟಿಟ್ಟ ಬುತ್ತಿ ಗ್ಯಾರಂಟಿ.

key words : kannada-film-9-relesed-darshan-boss-karnataka