ಮಾಜಿ ಸಿಎಂ ಜಯಲಲಿತಾ ಆಗಲು 10 ಕೆಜಿ ತೂಕ ಹೆಚ್ಚಿಸಿಕೊಂಡ ಕಂಗನಾ

Promotion

ಬೆಂಗಳೂರು, ಫೆಬ್ರವರಿ 11, 2020 (www.justkannada.in): ಮಾಜಿ ಸಿಎಂ ದಿ. ಜಯಲಲಿತಾ ಅವರ ಜೀವನಾಧಾರಿತ ಸಿನಿಮಾದಲ್ಲಿ ಜಯಾ ಪಾತ್ರಧಾರಿ ನಟಿ ಕಂಗನಾ 10 ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡಿದ್ದಾರೆ.

ಈ ಬಗ್ಗೆ ಚಿತ್ರದ ನಿರ್ದೇಶಕ ವಿಜಯ್ ಮಾಹಿತಿ ನೀಡಿದ್ದು ನಟಿ ಕಂಗನಾ ಜಯಲಲಿತಾ ಪಾತ್ರದಲ್ಲಿ ಸಂಪೂರ್ಣ ಮುಳುಗಿದ್ದಾರೆ. ಅವರ ಪ್ರತಿಯೊಂದು ನಡೆಯೂ ಅದ್ಭುತವಾಗಿ ಮೂಡಿಬಂದಿದೆ ಎಂದಿದ್ದಾರೆ.

ಇದೇ ಜೂನ್ 26 ಕ್ಕೆ ದೇಶಾದ್ಯಂತ ತೆರೆ ಕಾಣಲಿರುವ ಈ ಚಿತ್ರದಲ್ಲಿ ಎಂಜಿಆರ್ ಪಾತ್ರವನ್ನು ಹಿರಿಯ ನಟ ಅರವಿಂದ ಸ್ವಾಮಿ ನಿರ್ವಹಿಸಿದ್ದಾರೆ.