ಮದುವೆ ಬಳಿಕ ‘ವೆಬ್ ಸೀರಿಸ್’ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಐಂದ್ರಿತಾ

ಬೆಂಗಳೂರು, ಫೆಬ್ರವರಿ 11, 2020 (www.justkannada.in): ‘ದಿ ಕ್ಯಾಸಿನೋ – ಮೈ ಗೇಮ್, ಮೈ ರೂಲ್ಸ್’ ಎಂಬ ಹಿಂದಿ ವೆಬ್ ಸೀರೀಸ್ ನಲ್ಲಿ ನಟಿ ಐಂದ್ರಿತಾ ರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇಷ್ಟು ಕ್ಯಾಮರಾದಿಂದ ದೂರವೇ ಇದ್ದ ಐಂದ್ರಿತಾ ರೇ ಇದೀಗ ಹೊಸ ಪ್ರಾಜೆಕ್ಟ್ ಗೆ ಸಹಿ ಹಾಕುವ ಮೂಲಕ ಸಿನಿ ಪ್ರಿಯರಿಗೆ ಮತ್ತು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಮದುವೆ ಆದ ಮೇಲೆ ಕನ್ನಡ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ ಐಂದ್ರಿತಾ ರೇ ಇದೀಗ ವೆಬ್ ಲೋಕಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಹಿಂದಿಯ ವೆಬ್ ಸೀರೀಸ್ ವೊಂದರಲ್ಲಿ ಅಭಿನಯಿಸಲು ನಟಿ ಐಂದ್ರಿತಾ ರೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.