ಹೊಸ ಬಾಕ್ಸಾಫೀಸ್ ದಾಖಲೆ ಬರೆದ ಕಮಲ್ ಹಾಸನ್ ‘ವಿಕ್ರಂ’

Promotion

ಬೆಂಗಳೂರು, ಜೂನ್ 14, 2022 (www.justkannada.in): ಸೂಪರ್ ಸ್ಟಾರ್ ಕಮಲ್ ಹಾಸನ್ ಕರಿಯರ್‌ನಲ್ಲಿ ಹೊಸ ಬಾಕ್ಸಾಫೀಸ್ ದಾಖಲೆಗಳನ್ನು ‘ವಿಕ್ರಂ’ ಸಿನಿಮಾ ಮಾಡಿದೆ.

2022ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ತಮಿಳಿನ ಸಿನಿಮಾ ಎಂಬ ದಾಖಲೆ ಬರೆಯುವುದಕ್ಕೆ ಇನ್ನು ಕೆಲವೇ ಕೆಲವು ಮೆಟ್ಟಿಲುಗಳಿವೆ ಎಂಬ ಸುದ್ದಿ ಹೊರ ಬಿದ್ದಿದೆ.

ಬಿಡುಗಡೆಯಾದ 11 ದಿನಗಳಲ್ಲಿ ಬಾಕ್ಸಾಫೀಸ್ ಕಲೆಕ್ಷನ್ 300 ಕೋಟಿ ರೂ. ಕ್ಲಬ್ ಸೇರುವ ಸನಿಹದಲ್ಲಿದೆ ಎನ್ನುತ್ತಿವೆ ಬಾಕ್ಸ್ ಆಫೀಸ್ ವರದಿಗಳು.

ತಮಿಳು ಚಿತ್ರರಂಗದ ಪ್ರಕಾರ, ‘ವಿಕ್ರಂ’ ಸಿನಿಮಾ 2022ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನಲಾಗುತ್ತಿದೆ. . ‘ವಿಕ್ರಂ’ ಸಿನಿಮಾ ದಳಪತಿ ವಿಜಯ್ ಅಭಿನಯದ ‘ಬೀಸ್ಟ್’ ಸಿನಿಮಾವನ್ನು ಬೀಟ್ ಮಾಡಿದೆ. ಇತ್ತ ತಮಿಳುನಾಡಿನಲ್ಲಿ ‘ಕೆಜಿಎಫ್ 2’ ಸಿನಿಮಾ ಹಿಂದೆ ಬಿದ್ದಿದೆ.

ಕೆಲವು ಮೂಲಗಳ ಪ್ರಕಾರ, ‘ವಿಕ್ರಂ’ ಸಿನಿಮಾ 11 ದಿನಗಳಲ್ಲಿ 310 ಕೋಟಿ ಕಲೆಕ್ಷನ್ ಮಾಡಿ ಅತೀ ಹೆಚ್ಚು ಗಳಿಕೆ ಕಂಡ ತಮಿಳಿನ ಮೂರನೇ ಸಿನಿಮಾ ಎಂಬ ದಾಖಲೆ ಬರೆದಿದೆ.