Saturday, September 26, 2026

BDA Apartments

ದೇಶದಲ್ಲಿ ಒಂದೇ ದಿನ 8,822 ಹೊಸ ಕೋವಿಡ್ ಪ್ರಕರಣಗಳು ಪತ್ತೆ BDA JK_Adv BDA Adv
Home Front Page ದೇಶದಲ್ಲಿ ಒಂದೇ ದಿನ 8,822 ಹೊಸ ಕೋವಿಡ್ ಪ್ರಕರಣಗಳು ಪತ್ತೆ.

ದೇಶದಲ್ಲಿ ಒಂದೇ ದಿನ 8,822 ಹೊಸ ಕೋವಿಡ್ ಪ್ರಕರಣಗಳು ಪತ್ತೆ.

ನವದೆಹಲಿ,ಜೂನ್,15,2022(www.justkannada.in):  ದೇಶದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ 24 ಗಂಟೆಗಳಲ್ಲಿ 8,822 ಹೊಸ  ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಒಂದೇ ದಿನದಲ್ಲಿ 8822 ಕೋವಿಡ್  ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ  15 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. 5718 ಚೇತರಿಕೆ ಹೊಂದುವ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 4,32,45,517ಕ್ಕೆ ತಲುಪಿದೆ.

ದೇಶಾದ್ಯಂತ ನೀಡಲಾದ ಕೋವಿಡ್ ಲಸಿಕೆಯ ಪ್ರಮಾಣ 195.35 ಕೋಟಿ ಮೀರಿದೆ. ಒಟ್ಟಾರೆ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 10,43,221ಕ್ಕೆ ಏರಿದೆ. ನಿನ್ನೆ 1 ಕೋವಿಡ್ ಸಂಬಂಧಿತ ಸಾವು ವರದಿಯಾದ ನಂತರ ಸಾವಿನ ಸಂಖ್ಯೆ 10,739ಕ್ಕೆ ತಲುಪಿದೆ.

Key words: 8,822 -new Covid- cases -detected – single day