ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ‌ಕಿತ್ತಾಟ ವಿಚಾರ: ಮಾಧ್ಯಮದವರು ಮಸಾಲೆ ಹಚ್ಚಿ ಹೇಳ್ತಾರೆ ಎಂದ್ರು ಮಲ್ಲಿಕಾರ್ಜುನ ಖರ್ಗೆ….

Promotion

ಕಲ್ಬುರ್ಗಿ,ಅ,9,2019(www.justkannada.in): ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಇಂದು ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡಲಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ರಾಜ್ಯ ವಿರೋಧ ಪಕ್ಷದ ನಾಯಕನ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ‌ಕಿತ್ತಾಟದ ವಿಚಾರ ಕುರಿತು ಪ್ರತಿಕ್ರಿಯಿಸಿದ  ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಲ್ಲಿ ಯಾವ ಗುಂಪು ಇಲ್ಲ . ಡಿಫರೆನ್ಸ್ ಆಫ್ ಓಪಿನಿಯನ್ ಇರ್ತವೆ. ಡಿಫರೆನ್ಸ್ ಆಫ್ ಓಪಿನಿಯನ್ ಇದ್ದಾಗ ಪೇಪರ್ ಮತ್ತು ಟಿ ವಿ ಯವರು ಅದಕ್ಕೆ ಮಸಾಲೆ ಹಚ್ಚಿ ಹೇಳ್ತಾರೆ. ಚಾರಾಣೆ ಕೀ ಮುರ್ಗಿ ಬಾರಾಣೆ ಕೀ ಮಸಾಲಾ ಅಂದ ಹಾಗೇ ಮಾಡುತ್ತಾರೆ.  ಮಾಧ್ಯಮದಲ್ಲಿ ಸುದ್ದಿಯನ್ನು ಸೃಷ್ಟಿ ಮಾಡಿಕೊಂಡು ಹೇಳಬಾರದು. ಜನ ನಿಮ್ಮ ಮೇಲೆ ತುಂಬಾ ನಂಬಿಕೆ ಇಟ್ಟಿದ್ದಾರೆ. ಮುಂದೆ ಅದು ಸುಳ್ಳು ಅಂದಾಗ ನಿಮ್ಮ ಮೇಲಿನ ಗೌರವ ಹೊಗುತ್ತೆ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಸೇರಿದ ಮೇಲೆ ಎಲ್ಲರೂ ಕೂಡ ಕಾಂಗ್ರೆಸ್ ನವರೇ ಇಲ್ಲಿ ಮೂಲ, ವಲಸಿಗ ಸಂಬಂಧ ಇಲ್ಲ. ಕಾಂಗ್ರೆಸ್ ದೊಡ್ಡ ಸಮುದ್ರ ಇದ್ದ ಹಾಗೇ ಎಲ್ಲ ನದಿಗಳು ಅದ್ರಲ್ಲಿ ಬಂದು ಸೇರುತ್ತವೆ. ಪಕ್ಷದ ಒಳಗಡೆ ಮುನಿಸುಗಳ ಬಗ್ಗೆ ಮಾತಾಡಿಕೊಳ್ಳಲಿ ಆದ್ರೆ ಅದನ್ನ ಬಹಿರಂಗ ಪಡಿಸಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಇವತ್ತು ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡ್ತಾರೆ. ಮೊದಲು ಎರಡು ಪ್ರಪೋಸಲ್ ಇತ್ತು ಅಧಿವೇಶನದ ಸಲುವಾಗಿ ಆಯ್ಕೆ ಮಾಡಬೇಕಿತ್ತು. ಆದ್ರೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿದ್ರೆ  ರಾಜ್ಯವಾಪಿ ಪ್ರವಾಸ ಮಾಡಿ ಬರ ಪರಿಸ್ಥಿತಿ ಅಧ್ಯಯನ ಮಾಡಬಹುದು. ಸರ್ಕಾರ ತನ್ನ ನಿರ್ಣಯವನ್ನ ತೆಗೆದುಕೊಳ್ಳೊಕೆ ತೊಂದ್ರೆ ಆಗಿದೆ ಎಂದು ಖರ್ಗೆ ತಿಳಿಸಿದರು.

ಬಿಎಸ್ ವೈಗೆ ಕೇಂದ್ರದಿಂದ ಸಹಕಾರ ಸಿಗುತ್ತಿಲ್ಲ…

ಸಿಎಂ ಬಿಎಸ್ ಯಡಿಯೂರಪ್ಪಗೆ ಕೇಂದ್ರ ಸರ್ಕಾರದಿಂದ ಸಹಕಾರ ಸಿಗ್ತಿಲ್ಲ. ಹಾಗೆಯೇ ಸ್ಥಳಿಯ ಮಟ್ಟದಲ್ಲು ಕೂಡ ಬಿಜೆಪಿಯಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಆದ್ರೆ ಇವರು ಬೋರ್ಡ್ ಗಳ ಚೇರಮೇನ್ ಮಾಡೋದಕ್ಕೆ‌ ಒಂದೊಂದು ವರ್ಷ ತೆಗೆದುಕೊಂಡ್ರೆ ಹೇಗೆ?. ಪಾರ್ಲಿಮೆಂಟ್ ನಲ್ಲಿಯೂ ಆಗಲಿ ಸರ್ಕಾರದಲ್ಲಿ ದ್ವನಿ ಎತ್ತುವವರು ಯಾರು ಇಲ್ಲದಂತಾಗಿದೆ. ಕೇಂದ್ರಕ್ಕೆ ಪ್ರಶ್ನೆ ಮಾಡುವ ಧೈರ್ಯ ಕೂಡ ಯಾರ ಬಳಿ‌ಯೂ ಇಲ್ಲ ಬಿಜೆಪಿ ಶಾಸಕ‌ ಧ್ವನಿ ಎತ್ತಿದ್ರೆ ಶೋಕಾಸ್ ನೋಟೀಸ್ ಬರ್ತಿದೆ. ಇನ್ನೂ ಕೇಂದ್ರ ಸರ್ಕಾರದ ವಿರುದ್ದ ಯಾರು ಮಾತಾಡೋದೆ ಇರೋ ಹಾಗಾಗಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

ಮೋದಿ ಚಂದ್ರಯಾನ ಸಲುವಾಗಿ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಆದ್ರೆ ಹೋಗುವಾಗ ಏರಿಯಲ್ ಸರ್ವೆ ಆದ್ರು ಮಾಡಬಹುದಿತ್ತು. ಚುನಾವಣೆ ಸಮಯದಲ್ಲಿ ಒಂದು ಚುನಾವಣೆ ಮುಗಿದ ಮೇಲೆ ‌ಒಂದು ರೀತಿಯ ವರ್ತನೆ ಇದೆ. ಕೇಂದ್ರ ಸರ್ಕಾರ ಮತ್ತು‌ ರಾಜ್ಯ ಸರ್ಕಾರದ ಮಧ್ಯೆ ತಾಳಮೇಳ ಇಲ್ಲದಂತಾಗಿ ಅಭಿವೃದ್ಧಿ ಕೆಲಸ ಆಗ್ತಿಲ್ಲ. ರೈಲ್ವೇ ಇಲಾಖೆ ನೇಮಕಾತಿ ಆಗ್ತಿಲ್ಲ , ಹೀಗಾದ್ರೆ ಅಭಿವೃದ್ಧಿ ಕೆಲಸಗಳು ಹೇಗೆ ಆಗುತ್ತೆ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಮೋದಿ ವಿರುದ್ದ ಮಾತಾಡಿದವರ ಮೇಲೆ ಕೇಸ್ ದಾಖಲು ವಿಚಾರ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ , ಅವರು ನಂಬಿರೋ ತತ್ವಗಳು ವಿಚಾರಗಳು ಜನರ‌ ಮುಂದಿಟ್ಟರೆ ದೇಶ ದ್ರೋಹಿಗಳಾ? ಭಾಗವತ್ ಒಬ್ಬರೇ ದೇಶಭಕ್ತರು ದೇಶ ಪ್ರೇಮಿನಾ? ಸರ್ಕಾರ ಉಳಿಸಿಕೊಳ್ಳೊಕೆ ಇವೆಲ್ಲ ಪ್ರಯತ್ನ ಮಾಡ್ತಿರೋದು. ದೇಶದ ವಿರುದ್ದ ಮಾತಾಡಿದ್ರೆ, ಅವರು ಮಾತಾಡೊದ್ರಿಂದ ದೇಶ ಒಡೆದು ಹೊಗುತ್ತೆ ಅಂದ್ರೆ ಒಕೆ. ಅದೆಲ್ಲ ಬಿಟ್ಟು ಮೋದಿ ವಿಚಾರಧಾರೆ ಮೇಲೆ‌ನಂಬಿಕೆ ಇಟ್ಟವರು ದೇಶಭಕ್ತರು ಉಳಿದವರು ದೇಶದ್ರೋಹಿಗಳು ಅಂದ್ರೆ ಹೇಗೆ ಎಂದು ಖರ್ಗೆ ಪ್ರಶ್ನಿಸಿದರು.

Key words: kalburgi- mallikarjuna kharge-congress-media-opposition party- leader