ಕಲ್ಬುರ್ಗಿಯಲ್ಲಿ ನಮ್ಮವರೇ ಮೇಯರ್ ಆಗ್ತಾರೆ: ಅಧಿಕಾರ ಹಿಡಿಯಲು ಎಲ್ಲಾ ರೀತಿಯ ತಂತ್ರಗಾರಿಕೆ- ನಳೀನ್ ಕುಮಾರ್ ಕಟೀಲ್.

Promotion

 

ಕಲಬುರಗಿ,ಸೆಪ್ಟಂಬರ್,9,2021(www.justkannada.in): ಕಲ್ಬುರ್ಗಿ ಪಾಲಿಕೆಯಲ್ಲಿ ಬಿಜೆಪಿಯೇ ಅಧಿಕಾರ ಹಿಡಿಯಲಿದೆ. ನಮ್ಮವರೇ ಕಲ್ಬುರ್ಗಿಯಲ್ಲಿ ಪ್ರಥಮ ಪ್ರಜೆಯಾಗುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನುಡಿದರು.

ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ನಳೀನ್ ಕುಮಾರ್ ಕಟೀಲ್, ಕಲ್ಬುರ್ಗಿಯಲ್ಲಿ ಕಾಂಗ್ರೆಸ್ ಕೋಟೆ ಛಿದ್ರವಾಗಿದೆ. ಕಲ್ಬರ್ಗಿ ಎರಡು ಆನೆಯನ್ನ ಹೊಂದಿತ್ತು. ಆ ಪೈಕಿ ಒಂದು ಆನೆಯನ್ನ ಬೆಂಗಳೂರಿನಲ್ಲಿ ಇರುವಂತೆ ಕಲ್ಬುರ್ಗಿ ಜನತೆ ಮಾಡಿದ್ದೀರಿ ಎಂದು ಲೇವಡಿ ಮಾಡಿದರು.

ಕಲಬುರಗಿ ಪಾಲಿಕೆಯಲ್ಲಿ ಪೂರ್ಣ ರೀತಿಯ ಅಧಿಕಾರ ಹಿಡಿಯಲು ಪ್ರಯತ್ನ ನಡೆಸುತ್ತೇವೆ. ಎಲ್ಲಾ ರೀತಿಯ ತಂತ್ರಗಾರಿಕೆಯಿಂದ ಅಧಿಕಾರ ಹಿಡಿಯುತ್ತೇವೆ. ನಮ್ಮ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಅದ್ಭುತ ಕೆಲಸ ಮಾಡಿದ್ದಾರೆ. ಪಾಲಿಕೆಯಲ್ಲಿ ನಮ್ಮವರೇ ಮೇಯರ್ ಆಗುವುದು ಖಚಿತ. ಪೂರ್ಣ ರೀತಿಯ ಅಧಿಕಾರ ಹಿಡಿಯಲು ಪ್ರಯತ್ನ ನಡೆಸುತ್ತೇವೆ ಎಂದರು.

Key words: kalburgi-city corporation- Mayor –bjp-power-Naleen Kumar Kateel.