ಈ ದೇಶ ಕ್ರಿಸ್ತನ ನಾಡಲ್ಲ. ಕೃಷ್ಣನ ನಾಡು: ತಾಕತ್ತಿದ್ರೆ ಏಸುಪ್ರತಿಮೆ ನಿರ್ಮಾಣ ಮಾಡಲಿ: ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ದ ಕಲ್ಲಡ್ಕ ಪ್ರಭಾಕರ್ ಗುಡುಗು…

ರಾಮನಗರ,ಜ,13,2020(www.justkannada.in): ಈ ದೇಶ ಕ್ರಿಸ್ತನ ನಾಡಲ್ಲ. ಕೃಷ್ಣನ ನಾಡು. ತಾಕತ್ತಿದ್ರೆ ಡಿಕೆಶಿ ಏಸು ಪ್ರತಿಮೆ ನಿರ್ಮಾಣ ಮಾಡಲಿ. ನಮ್ಮ ತಾಕತ್ತು ಏನೆಂದು ತೋರಿಸುತ್ತೇವೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಸವಾಲು ಹಾಕಿದರು.

ಕಪಾಲಬೆಟ್ಟದಲ್ಲಿ ಏಸುಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ವಿರೋಧಿಸಿ ಹಿಂದೂ ಜಾಗರಣಾ ವೇದಿಕೆ ಮತ್ತು ಬಿಜೆಪಿ ಕನಕಪುರದ ಅಯ್ಯಪ್ಪ ದೇಗುಲದಿಂದ ತಹಶೀಲ್ದಾರ ಕಚೇರಿವರೆಗೆ ಬೃಹತ್ ರ್ಯಾಲಿ ನಡೆಸಿತು. ನಂತರ ಚೆನ್ನಬಸಪ್ಪ ವೃತ್ತದಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ.

ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್, ಹಿಂದೂ ಸಮಾಜದ ವಿರುದ್ದ ಏನೇ ಮಾಡಿದ್ರೂ ಸಹಿಸಲ್ಲ.ಹಿಂದೂಗಳು ಎಚ್ಚೆತ್ತುಕೊಳ್ಳಬೇಕಿದೆ.  ನಾವು ಶಾಂತಿಯಿಂದ ಇದ್ದೇವೆ. ಅದನ್ನ ದುರ್ಬಳಕೆ ಮಾಡಬೇಡಿ. ನಮ್ಮ ಶಾಂತಿ ಬಳಸಿ ಹಿಂದೂಗಳನ್ನ ಒಡೆಯಬೇಡಿ. ನೀವು ಶಾಂತಿ ಹೆಸರಿನಲ್ಲಿ ಸಮಾಜ ಒಡೆಯಲು ಯತ್ನಿಸುತ್ತಿದ್ದೀರಾ ಶಾಂತಿ ನೆಲಸಲು ಬುದ್ದ  ಪೇಜಾವರ ಶ್ರೀಳಗಳ ಪ್ರತಿಮೆ ಬೇಕಾದ್ರೆ ಮಾಡಲಿ ಎಂದು ಹೇಳಿದರು.

ಡಿಕೆಶೀ ಈಗ ಮಂತ್ರಿಗಳಲ್ಲ ಕಂತ್ರಿ ಆಗಿದ್ದೀರಾ. ನೀವು ನಾಶರಾಗ್ತೀರಾ ಡಿಕೆಶಿ.  ಮೋಸ ಮಾಡಿ ಮತಾಂತರ ಮಾಡಲಾಗುತ್ತಿದೆ. ಮೋಸದಿಂದ ಏಸು ಪ್ರತಿಮೆ ನಿರ್ಮಿಸಲು ಹೊರಟಿದ್ದೀರಿ. ಡಿಕೆಶಿ ಮಾಡುತ್ತಿರುವುದು ದೇಶ ವಿರೋಧಿ ಕೆಲಸ. ನಾವು ಬದುಕಿರುವವರೆಗೂ ನಿಮ್ಮ ವಿರುದ್ದ ಹೋರಾಟ ಮಾಡ್ತೇವೆ. ನಿಮ್ಮ ರಾಜಕೀಯ ಜೀವನ ಬಲಿ ಪಡೆಯುತ್ತೇವೆ ಎಂದು ಡಿ ಕೆ ಶಿವಕುಮಾರ್ ವಿರುದ್ದ ಗುಡುಗಿದರು.

ನಾವು ಬಲಿದಾನಕ್ಕೂ ಬೇಕಾದರೆ ನಾವು ಸಿದ್ದರಿದ್ದೇವೆ. ಸಂಸ್ಕೃತಿಗೆ ಕಲ್ಲು ಹಾಕಲು ಹೊರಟಿದ್ದೀರಲ್ಲಾ ಅದಕ್ಕೆ ನಮ್ಮ ವಿರೋಧವಿದೆ. ದೇಶದಲ್ಲಿರುವ ಚರ್ಚ್ ಮಸೀದಿಗಳ ಭೂಮಿ ಹಿಂದೂಗಳದ್ದೂ. ಸುಳ್ಳು, ಮೋಸ ವಂಚನೆಯಿಂದ ಎಷ್ಟು ದಿನ ಇರುತ್ತೀರಿ? ವೋಟ್ ಬ್ಯಾಂಕ್ ಗಾಗಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದೀರಾ? ಅಮೆರಿಕ, ಇಂಗ್ಲೆಂಡ್ ನಲ್ಲಿ ಬೇಕಾದರೆ ಪ್ರತಿಮೆ ನಿರ್ಮಾಣ ಮಾಡಿ. ಆದರೆ ಇಲ್ಲಿ ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಕಲ್ಲಡ್ಕ ಪ್ರಭಾಕರ್ ಹೇಳಿದರು.

Key words: kanakapura- jesus statue-oppese-rss leader-kalladka prabhakar-former minister- DK shivakumar