ಒಬ್ಬರು ಪುಣ್ಯಾತ್ಮರನ್ನ ಕೊಡೋ ಜಾಗದಲ್ಲಿ ಇಟ್ಟಿದ್ದವು: ಈಗ ಬೇಡೋ ಜಾಗಕ್ಕೆ ಹೋಗಿದ್ದಾರೆ- ವೈಎಸ್ ವಿ ದತ್ತ ಕುರಿತು ಸಿಎಂ ಇಬ್ರಾಹಿಂ ಲೇವಡಿ.

Promotion

ಚಿಕ್ಕಮಗಳೂರು,ಏಪ್ರಿಲ್,7,2023(www.justkannada.in): ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ  ವೈಎಸ್ ವಿ ದತ್ತ ಅವರಿಗೆ ಕಡೂರು ಕ್ಷೇತ್ರದಿಂದ ಟಿಕೆಟ್ ಮಿಸ್ ಆಗಿದ್ದು ಈ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.

ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರು ಪುಣ್ಯಾತ್ಮ ಇದ್ದರು. ಅವರನ್ನ ಕೊಡೋ ಜಾಗದಲ್ಲಿ ಇಟ್ಟಿದ್ದವು. ಈಗ ಬೇಡೋ ಜಾಗಕ್ಕೆ ಹೋಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವೈಎಸ್ ವಿ ದತ್ತ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ  ವ್ಯಂಗ್ಯವಾಡಿದರು.

ಕಡೂರಿನಲ್ಲಿ ಇಂದು ಮಾತನಾಡಿದ ಸಿಎಂ ಇಬ್ರಾಹಿಂ, ಕಾರ್ಯಕರ್ತರೇ ಇದು ನಿಮ್ಮ ಮನೆ. ವಾಪಸ್ ಬನ್ನಿ ಎಂದು  ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಹೋದ ಕಾರ್ಯಕರ್ತರಿಗೆ ಮನವಿ ಮಾಡಿದರು.

ಇನ್ನು  ಮಹಿಳೆಯರಿಗೆ 2ಸಾವಿರ ರೂ. ಕೊಡುವುದಾಗಿ ಕಾಂಗ್ರೆಸ್ ಘೋಷಣೆ ವಿಚಾರ ಕುರಿತು ಮಾತನಾಡಿದ ಸಿಎಂ ಇಬ್ರಾಹಿಂ,  ಮನೆಯ ಯಜನಮಾನಿಗೆ  2ಸಾವಿರ ಕೊಡುತ್ತೇವೆ ಎಂದಿದ್ದಾರೆ. 2 ಸಾವಿರ ಕೊಟ್ಟು ಮನೆಯಲ್ಲಿ ಅತ್ತೆ ಸೊಸೆ ಜಗಳ ತಂದಿಡುತ್ತಾರೆ ಎಂದು ಟೀಕಿಸಿದರು.

Key words: kadur-jds-president-CM Ibrahim-tong-YSV Datta