ಮೈಸೂರಿನ ಕೆ.ವಿಸಂಪತ್ ಕುಮಾರ್  ದಂಪತಿಗೆ ಪದ್ಮಶ್ರೀ ಪ್ರಶಸ್ತಿ

Promotion

 

ಮೈಸೂರು, ಜ.25, 2020 : (www.justkannada.in news ) : ಮೈಸೂರು ಮೂಲದ  ‘ ಸುಧರ್ಮ ಪತ್ರಿಕೆ ‘  ಸಂಪಾದಕ  ಕೆ.ವಿ. ಸಂಪತ್ ಕುಮಾರ್ ಹಾಗೂ ಅವರ ಪತ್ನಿ ವಿದುಷಿ ವಿಜಯಲಕ್ಷ್ಮಿ ಕೆ.ಎಸ್. ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಸುಧರ್ಮ ಪತ್ರಿಕೆ ಭಾರತದ ಏಕೈಕ ಸಂಸ್ಕೃತ ಪತ್ರಿಕೆ ಎಂಬ ಹೆಗ್ಗಳಿಕೆ ಹೊಂದಿದ್ದು, ಕಳೆದ ಕೆಲ ವರ್ಷಗಳಿಂದ ನಿರಂತರ ಮುದ್ರಣ ಕಾಣುತ್ತಿದೆ. ಪತ್ರಿಕೆಯ ಈ ಸಾಧನೆ ಗುರುತಿಸಿ ಸಂಪಾದಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

K V Sampath Kumar is the Editor of one and the only Sanskrit Daily SUDHARMA in India. It is published from Mysore.

ಮುಖ್ಯಮಂತ್ರಿ ಅಭಿನಂದನೆ

ಈ ಬಾರಿಯ ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಹಾಜಬ್ಬ ಹಾಗೂ ಉತ್ತರ ಕನ್ನಡ ಜಿಲ್ಲೆಯ ತುಳಸಿ ಗೌಡ ಅವರನ್ನು ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪ ಅವರು ಅಭಿನಂದಿಸಿದ್ದಾರೆ.

padma-award-karnataka

ಹರೇಕಳ ಹಾಜಬ್ಬ ಅವರು ಶಿಕ್ಷಣ ಕ್ಷೇತ್ರ ಮತ್ತು ತುಳಸಿ ಗೌಡ ಅವರು ಪರಿಸರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇವರಿಬ್ಬರ ನಿಸ್ಪೃಹ ಸೇವೆ  ಇತರರಿಗೂ ಮಾದರಿಯಾಗಲಿ ಎಂದು ಅವರು ಆಶಿಸಿದ್ದಾರೆ.

 

K V Sampath Kumar is the Editor of one and the only Sanskrit Daily SUDHARMA in India. It is published from Mysore.