ಬೆಂಗಳೂರು ಉಪನಗರ ರೈಲ್ವೆ ಕಾಮಗಾರಿಗಳನ್ನು ಕ್ಷಿಪ್ರಗೊಳಿಸಲು ಕೆ-ರೈಡ್ ನಿರ್ಧಾರ.

ಬೆಂಗಳೂರು, ಜೂನ್ 23, 2022 (www.justkannada.in): ಪ್ರಧಾನಿ ನರೇಂದ್ರ ಮೋದಿಯವರು 40 ವರ್ಷಗಳಷ್ಟು ವಿಳಂಬಗೊMಡಿರುವ ಬೆಂಗಳೂರು ಉಪನಗರ ರೈಲು ಯೋಜನೆ ಮುಂದಿನ 40 ತಿಂಗಳೊಳಗೆ ಪೂರ್ಣಗೊಳ್ಳುವುದು ಎಂದು ತಿಳಿಸಿದ ಒಂದು ದಿನದ ನಂತರ, ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಸಂಸ್ಥೆ ಕೆ-ರೈಡ್ ಕಾಮಗಾರಿಗಳನ್ನು ವೇಗಗೊಳಿಸಲು ನಿರ್ಧರಿಸಿದೆ. ಡಿಸೆಂಬರ್ 2026ರ ವೇಳೆಗೆ ಎಲ್ಲಾ ನಾಲ್ಕು ಕಾರಿಡಾರ್‌ ಗಳನ್ನು ಪೂರ್ಣಗೊಳಿಸುವ ಗುರಿಯನ್ನು ನಿಗಧಿಪಡಿಸಿಕೊಂಡಿದೆ.

ಪ್ರಧಾನಿ ಮೋದಿಯವರು ಸೋಮವಾರದಂದು ಈ ಯೋಜನೆಯ ಶಂಕು ಸ್ಥಾಪನೆಯನ್ನು ನೆರವೇರಿಸಿ, ಬೈಯ್ಯಪ್ಪನಹಳ್ಳಿ ಹಾಗೂ ಹೀಲಳಿಗೆ (೨೩ ಕಿ.ಮೀ.) ನಡುವಿನ ಮಾರ್ಗ ಡಿಸೆಂಬರ್ ೨೦೨೫ರ ವೇಳೆಗೆ ಪೂರ್ಣಗೊಳ್ಳುವುದಾಗಿ ಘೋಷಿಸಿದರು. ಈ ಮಾರ್ಗದ ನಡುವೆ ಹೀಲಳಿಗೆ, ಬೊಮ್ಮಸಂದ್ರ, ಸಿಂಗೇನ ಅಗ್ರಹಾರ, ಹುಸ್ಕೂರು, ಅಂಬೇಡ್ಕರ್ ನಗರ, ಕಾರ್ಮೆಲರಾಂ, ಬೆಳ್ಳಂದೂರು ರಸ್ತೆ, ಮಾರತ್‌ ಹಳ್ಳಿ, ಕಗ್ಗದಾಸಪುರ ಹಾಗೂ ಬೆನ್ನಂಗಿನಹಳ್ಳಿಗಳಲ್ಲಿ ನಿಲ್ದಾಣವನ್ನು ಹೊಂದಲಿದೆ. ಇದು ೪೬ ಕಿ.ಮೀ. ಉದ್ದದ ಹೀಲಳಿಗೆ-ಯಲಹಂಕ-ರಾಜಾನಕುಂಟೆ ಕಾರಿಡಾರ್‌ ನ (ಕನಕ ಮಾರ್ಗ) ಭಾಗವಾಗಿದೆ.

ಈ ಕನ್ನಕ ಮಾರ್ಗದಡಿ ೧೩.೨ ಕಿ.ಮೀ. ಎತ್ತರಿಸಿದ ಮಾರ್ಗ ಹಾಗೂ ೩೨.೯ ಕಿ.ಮೀ. ಉದ್ದ ಕಾರಿಡಾರ್‌ ಗಳನ್ನು ಒಳಗೊಂಡಿದೆ. ಆದರೆ ಕೆ-ರೈಡ್ ಇನ್ನೂ ಸಿವಿಲ್ ಕಾಮಗಾರಿಗಳ ಟೆಂಡರ್ ಅನ್ನು ಆಹ್ವಾನಿಸಬೇಕಿದೆ.

ಈ ಸಂಬಂಧ ಮಾತನಾಡಿದ ಕೆ-ರೈಡ್‌ ನ ಓರ್ವ ಅಧಿಕಾರಿಯೊಬ್ಬರು, “ನಾವು ಬೈಯ್ಯಪ್ಪನಹಳ್ಳಿ-ಯಶವಂತಪುರ-ಚಿಕ್ಕಬಾಣಾವರ (ಮಲ್ಲಿಗೆ ಮಾರ್ಗ) ಮಾರ್ಗದ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಇನ್ನೆರಡು ವಾರಗಳಲ್ಲಿ ನಡೆಯಲಿರುವ ಮುಂದಿನ ಬೋರ್ಡ್ ಸಭೆಯಲ್ಲಿ ಕಾರ್ಯಾದೇಶವನ್ನು ಹೊರಡಿಸಲಾಗುವುದು. ಕನಕ ಮಾರ್ಗದ ಸಿವಿಲ್ ಕಾಮಗಾರಿಯ ಟೆಂಡರ್ ಬಹುಶಃ ಮುಂದಿನ ತಿಂಗಳು ಹೊರಡಿಸಲಾಗುವುದು. ಉಳಿದ ಕಾರಿಡಾರ್‌ ಗಳು: ಕೆಎಸ್‌ಆರ್ ಬೆಂಗಳೂರು ನಗರ-ದೇವನಹಳ್ಳಿ (ಸಂಪಿಗೆ ಮಾರ್ಗ) ಹಾಗೂ ಕೆಂಗೇರಿ-ಕಂಟೋನ್‌ಮೆಂಟ್-ವೈಟ್‌ಫೀಲ್ಡ್ (ಪಾರಿಜಾತ) ಮಾರ್ಗಗಳ ಟೆಂಡರ್‌ಗಳನ್ನು ಡಿಸೆಂಬರ್ ೨೦೨೨ರ ವೇಳೆಗೆ ಹೊರಡಿಸಲಾಗುವುದು,” ಎಂದು ವಿವರಿಸಿದರು.

ಕನಕ ಮಾರ್ಗ ಮೊದಲು ಕಾರ್ಯಾಚರಣೆ ಆರಂಭವಾಗುವುದೆಂದು ತಿಳಿಸಿದ ಅಧಿಕಾರಿಯು, “ಬೈಯ್ಯಪ್ಪನಹಳ್ಳಿ-ಹೀಲಳಿಗೆ ನಡುವಿನ ೨೩ ಕಿ.ಮೀ. ಭಾಗದಲ್ಲಿ ೪ ಕಿ.ಮೀ.ಗಳಷ್ಟು ಮಾತ್ರ ಎತ್ತರಿಸಿದ ಭಾಗವಿದ್ದು ಉಳಿದದ್ದು ಗ್ರೇಡ್ ಭಾಗವಾಗಿದೆ. ಇದರ ಅಲೈನ್‌ನ್‌ ಮೆಂಟ್ ಸಹ ಹಾಲಿ ರೈಲ್ವೆ ಮಾರ್ಗದ ಪಕ್ಕದಲ್ಲೇ ಹಾದು ಹೋಗಲಿದೆ. ಹಾಗಾಗಿ ಖಾಸಗಿ ಭೂಮಿಯ ಅಗತ್ಯ ಕಡಿಮೆ ಇದೆ. ಈ ಕೆಲಸ ಸ್ವಲ್ಪ ಹಗುರ,” ಎಂದು ಅಭಿಪ್ರಾಯಪಟ್ಟರು.

ಜರ್ಮನಿ ಮೂಲದ ಕೆಎಫ್‌ ಡಬ್ಲ್ಯುಯ ಹಾಗೂ ಫ್ರಾನ್ಸ್ ಮೂಲದ ಎಎಫ್‌ ಡಿ ಕಂಪನಿಗಳು ತಲಾ ೫೦೦ ಮಿಲಿಯನ್ ಹಾಗೂ ೩೦೦ ಮಿಲಿಯನ್ ಪೌಂಡ್‌ ಗಳ ನಿಧಿಯನ್ನು ಒದಗಿಸುತ್ತಿವೆ ಎಂದು ತಿಳಿಸಿದರು. “ಹೈ-ಫ್ರೀಕ್ವೆನ್ಸಿ ಕಾರ್ಯಾಚರಣೆಗಳಿಗಾಗಿ ಸಂವಹನಾ-ಆಧಾರಿತ ರೈಲು ನಿಯಂತ್ರಣ (Communication-based train control (CBTC)-system) ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು. ಆರಂಭದಲ್ಲಿ ೧೨ ರಿಂದ ೨೦ ನಿಮಿಷಗಳಿಗೆ ಒಂದರಂತೆ ಆರು ಬೋಗಿಗಳೀರುವ ರೈಲು ಕಾರ್ಯಾರಂಭ ಮಾಡಲಿದೆ. ಈ ಸಿಬಿಟಿಸಿ ೯೦ ಸೆಕೆಂಡುಗಳಿಗಿಂತ ಕಡಿಮೆ ಅವಧಿಗೆ ರೈಲುಗಳ ಓಡಾಟವನ್ನು ಕಡಿಮೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸೇವೆಗಳು ಬೆಳಿಗ್ಗೆ ೫ ಗಂಟೆಗೆ ಆರಂಭವಾಗಿ, ಮಧ್ಯರಾತ್ರಿಯವರೆಗೆ ಲಭ್ಯವಾಗಲಿದ್ದು, ೯೦ ಕಿಮೀಗಳ ವೇಗದಲ್ಲಿ ಓಡಾಡಲಿದ್ದು, ಒಂದು ನಿಲ್ದಾಣಗಳಲ್ಲಿ ೩೦ ಸೆಕೆಂಡುಗಳ ಕಾಲ ನಿಲ್ಲಲಿದೆ,” ಎಂದು ಅಧಿಕಾರಿ ವಿವರಿಸಿದರು.

“ಆರು ಬೋಗಿಗಳ ರೈಲುಗಳ ಕಾರ್ಯಾರಂಭವನ್ನು ಮಾಡುವ ಯೋಜನೆಯಿದ್ದು, ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪ್ಲಾಟ್‌ ಫಾರ್ಮ್ ಗಳನ್ನು ಒಂಬತ್ತು ಬೋಗಿಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗುವುದು. ಜೊತೆಗೆ ಸೀಟುಗಳ ಸಾಮರ್ಥ್ಯವನ್ನೂ ಸಹ ಹೆಚ್ಚಿಸಲು ಯೋಚಿಸುತ್ತಿದ್ದೇವೆ,” ಎಂದರು.

ಮೆಟ್ರೋ ರೈಲಿನಂತೆ ದರಗಳು?

ಡಿಪಿಆರ್ ಪ್ರಕಾರ, ಉಪನಗರ ರೈಲುಗಳ ಕನಿಷ್ಠ ದರ ೩ ಕಿ.ಮೀ.ಗಿಂತ ಕಡಿಮೆ ದೂರಕ್ಕೆ ರೂ.೧೩ರಷ್ಟು ಇರಲಿದೆ. ಚೆನ್ನೈ ಹಾಗೂ ಮುಂಬೈ ನಗರಗಳಲ್ಲಿ ಇದೇ ಉದ್ದದ ಪ್ರಯಾಣಕ್ಕೆ ಪ್ರಸ್ತುತ ದರ ರೂ.೫ ಆಗಿದೆ. ೧೫ ಕಿ.ಮೀ.ಗಳ ಪ್ರಯಾಣಕ್ಕೆ ರೂ.೩೫ ದರ ಇರಲಿದೆ. ೨೦೨೦-೨೧ನೇ ಕೇಂದ್ರ ಆಯವ್ಯಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರು ಉಪನಗರ ರೈಲುಗಳ ಟಿಕೆಟ್ ದರಗಳು ಮೆಟ್ರೋ ಮಾದರಿಯಂತೆ ಇರಲಿದೆ ಎಂದು ತಿಳಿಸಿದ್ದರು. ಅಂದರೆ ಅದರರ್ಥ ಮೆಟ್ರೊ ಹಾಗೂ ಉಪನಗರ ರೈಲುಗಳ ನಡುವಿನ ಟಿಕೆಟ್ ದರಗಳಲ್ಲಿ ಅಷ್ಟೇನೂ ವ್ಯತ್ಯಾಸವಿರುವುದಿಲ್ಲ. ಆದರೆ ಚೆನ್ನೈ ಹಾಗೂ ಮುಂಬೈ ನಗರಗಳಲ್ಲಿ ಉಪನಗರ ರೈಲುಗಳ ಟಿಕೆಟ್ ದರಗಳು ಮೆಟ್ರೋ ರೈಲುಗಳಿಗಿಂತ ಬಹಳ ಕಡಿಮೆ ಇವೆ.

ಈ ಸಂಬಂಧ ಮಾತನಾಡಿದ ಕೆ-ರೈಡ್‌ ನ ಅಧಿಕಾರಿಯು, “ಟಿಕೆಟ್ ದರಗಳ ಕುರಿತು ಮಾತನಾಡುವುದು ಈಗ ಬಹಳ ಮುಂಚಿತ ಎನಿಸುತ್ತದೆ, ಆದರೆ ಬಹುತೇಕ ಮೆಟ್ರೊ ರೈಲು ಟಿಕೆಟ್ ದರಗಳಂತೆ ಇರಲಿದೆ,” ಎಂದರು.

“ಬೆಂಗಳೂರು ನಗರ, ಇಡೀ ದೇಶದಲ್ಲೇ ಆಧುನಿಕ ಉಪನಗರ ರೈಲ್ವೆ ವ್ಯವಸ್ಥೆಯನ್ನು ಹೊಂದುವ ನಗರವಾಗಲಿದೆ. ಪಿಪಿಪಿ ಮಾದರಿಯಡಿ ಒಟ್ಟು ೫೩ ಹವಾನಿಯಂತ್ರಿತ ರೈಲುಗಳ ಸೇವೆಗಳನ್ನು ಒದಗಿಸಲಾಗುತ್ತದೆ. ಈ ರೈಲುಗಳು ಸ್ವಯಂಚಾಲಿತ ಡಬ್ಬಲ್-ಲೀಫ್ ಸ್ಲೆಡಿಂಗ್ ಬಾಗಿಲುಗಳನ್ನು ಹೊಂದಲಿದೆ. “ಮುಂದಿನ ತಿಂಗಳ ವೇಳೆಗೆ ಪಿಪಿಪಿ ಮಾದರಿಯಡಿ ರೋಲ್ಲಿಂಗ್ ಸ್ಟಾಕ್ ಅಳವಡಿಸಲು ಟೆಂಡರ್ ಹೊರಡಿಸಲಿದ್ದೇವೆ. ಈ ಕಾಮಗಾರಿ ಪೂರ್ಣಗೊಳ್ಳಲು ಮೂರು ವರ್ಷಗಳು ಬೇಕಾಗುತ್ತದೆ,” ಎಂದು ವಿವರಿಸಿದರು.

ಸುದ್ದಿ ಮೂಲ: ಟೈಮ್ಸ್ ಆಫ್ ಇಂಡಿಯಾ

Key words: K-Ride-decision- expedite -Bangalore -suburban rail -works