ಅಪ್ಪು ನೋಡಲು ಮದುವೆ ಮುಗಿಸಿ ನೇರವಾಗಿ ಮೈಸೂರಿನ ಮಹಾರಾಜ ಕಾಲೇಜಿಗೆ ಬಂದ ನವ ದಂಪತಿ !

Promotion

ಮೈಸೂರು, ಜೂನ್ 12, 2019 (www.justkannada.in): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಯುವರತ್ನ ಸಿನಿಮಾ ಶೂಟಿಂಗ್ ನಲ್ಲಿ ಮೈಸೂರಿನಲ್ಲಿ ಬ್ಯುಸಿಯಾಗಿದ್ದಾರೆ.

ಅಪ್ಪು ಶೂಟಿಂಗ್ ಗೆ ಬಂದಿರುವ ಸುದ್ದಿ ಕೇಳಿ ಈಗ ಅಭಿಮಾನಿಗಳ ದಂಡೇ ಅವರನ್ನು ನೋಡಲು ಹರಿದುಬರುತ್ತಿದೆ.

ಯುವ ಜೋಡಿಯೊಂದು ಮದುವೆ ಮುಗಿಸಿಕೊಂಡು ಅಪ್ಪ-ಅಮ್ಮನ ಆಶೀರ್ವಾದ ಪಡೆಯುವುದು ಬಿಟ್ಟು ನೇರವಾಗಿ ತಮ್ಮ ಮೆಚ್ಚಿನ ಪವರ್ ‍ಸ್ಟಾರ್ ನೋಡಲು ಬಂದಿದ್ದಾರೆ.

ಇತ್ತೀಚಿಗೆ ಸಚಿವ ಸಾ ರಾ ಮಹೇಶ್ ಕೂಡಾ ಶೂಟಿಂಗ್ ಸೆಟ್ ಗೆ ಬಂದು ಪವರ್ ಸ್ಟಾರ್ ರನ್ನು ಭೇಟಿ ಮಾಡಿ ಹೋಗಿದ್ದಾರೆ. ಅದಲ್ಲದೆ, ಅಭಿಮಾನಿಗಳು ಬಂದು ಅಪ್ಪು ಜತೆ ಸೆಲ್ಫೀ ತೆಗೆಸಿಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.