ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನೀಡುವ ವಾರ್ಷಿಕ ಪ್ರಶಸ್ತಿಗೆ ಪತ್ರಕರ್ತರು ಆಯ್ಕೆ.

kannada t-shirts

ಮೈಸೂರು,ಆಗಸ್ಟ್,10,2021(www.justkannada.in): ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ 2020-21ನೇ ಸಾಲಿನ ಪತ್ರಿಕಾ ದಿನಾಚರಣೆ ಅಂಗವಾಗಿ ಸಂಘದ ವತಿಯಿಂದ ಕೊಡ ಮಾಡುವ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳ ಅತ್ಯುತ್ತಮ ವರದಿ, ಛಾಯಾಚಿತ್ರ ಮತ್ತು ಅತ್ಯುತ್ತಮ ವಿದ್ಯುನ್ಮಾನ ವರದಿಗಳ ವಾರ್ಷಿಕ ಪ್ರಶಸ್ತಿಗೆ ಕೆಳಕಂಡವರು ಆಯ್ಕೆಯಾಗಿದ್ದಾರೆ.

ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ‘’ಆಸ್ಪತ್ರೆ ಕೊಠಡಿಯಲ್ಲಿ ಹಾಡಿ ವ್ಯಕ್ತಿಯ ಅರಣ್ಯ ರೋದನ’’ ಲೇಖನಕ್ಕೆ ವರದಿಗಾರ ಸತೀಶ್ ದೆಪುರ ಅವರಿಗೆ ವರ್ಷದ ಅತ್ಯುತ್ತಮ ಕನ್ನಡ ವರದಿ ಪ್ರಶಸ್ತಿ ಲಭಿಸಿದೆ.

ಹುಣಸೂರು ತಾಲೂಕು ಪ್ರಜಾವಾಣಿ ವರದಿಗಾರ ಎಚ್.ಎಸ್.ಸಚ್ಚಿತ್ ಅವರ “ಗಿರಿಜನರ ಮಕ್ಕಳು ಕಾಫಿ ತೋಟದ ಕಾರ್ಮಿಕರು- ಲೇಖನಕ್ಕೆ ವರ್ಷದ ಗ್ರಾಮಾಂತರ ವಿಭಾಗದ ಅತ್ಯುತ್ತಮ ಕನ್ನಡ ವರದಿ ಪ್ರಶಸ್ತಿ ಲಭಿಸಿದೆ.

ಸ್ಟಾರ್ ಆಫ್ ಮೈಸೂರು ಪತ್ರಿಕೆಯ ವರದಿಗಾರ ರಾಜಕುಮಾರ್ ಭಾವಸಾರ್ ಅವರ “Hoof care the saga behind bare hands- ಲೇಖನಕ್ಕೆ ವರ್ಷದ ಅತ್ಯುತ್ತಮ ಇಂಗ್ಲಿಷ್ ವರದಿ ಪ್ರಶಸ್ತಿ ಲಭಿಸಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ ಪ್ರೆಸ್ ಛಾಯಾಗ್ರಾಹಕ ಎಸ್.ಉದಯಶಂಕರ್ ಅವರ “ಹಂದಿಯನ್ನು ಹುಲಿ ಬೇಟೆಯಾಡುತ್ತಿರುವ ಚಿತ್ರಕ್ಕೆ ವರ್ಷದ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿ ಲಭಿಸಿದೆ.

ದೂರದರ್ಶನ ವರದಿಗಾರ ಜಿ.ಜಯಂತ್ ಹಾಗೂ ಕ್ಯಾಮೆರಾಮನ್ ರಾಮು ಅವರ ಸೌರಭ ಕಾರ್ಯಕ್ರಮದಲ್ಲಿ ಆಕ್ಷಯ ಆಹಾರ ಜೋಳಿಗೆ ಸಂಸ್ಥೆ’ಯ ಕುರಿತ ವಿಶೇಷ ವರದಿಗೆ ಅತ್ಯುತ್ತಮ ವಿದ್ಯುನ್ಮಾನ ವರದಿ ಪ್ರಶಸ್ತಿ ಲಭಿಸಿದೆ.

ಅಭಿನಂದಿತರು:

ಜೀವಮಾನ ಸಾಧನೆ : ದಿ ಹಿಂದೂ ಪತ್ರಿಕೆಯ ಡೆಪ್ಯೂಟಿ ಎಡಿಟರ್ ಆರ್ ಕೃಷ್ಣಕುಮಾರ್, ವರ್ಷದ ಹಿರಿಯ ಉಪಸಂಪಾದಕ: ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕ ಎಚ್.ಕೆ.ನಾಗೇಶ್,

ಹಿರಿಯ ಛಾಯಾಗ್ರಾಹಕ: ಟೈಮ್ಸ್ ಆಫ್ ಇಂಡಿಯಾದ ಛಾಯಾಗ್ರಾಹಕ ಎಸ್ ಆರ್  ಮಧುಸೂಧನ್, ವರ್ಷದ ಗ್ರಾಮಾಂತರ ಪತ್ರಕರ್ತ ಕೆ.ಆರ್‌.ನಗರದ ಮೈಸೂರು ಮಿತ್ರ ವರದಿಗಾರ ಕೆ.ಟಿ.ರಮೇಶ್‌, ದೃಶ್ಯ ಮಾಧ್ಯಮದ ವರ್ಷದ ಹಿರಿಯ ವರದಿಗಾರ  ಪಬ್ಲಿಕ್ ಟಿವಿಯ ಹಿರಿಯ ವರದಿಗಾರ ಕೆ.ಪಿ.ನಾಗರಾಜ್, ವರ್ಷದ ಹಿರಿಯ ಕ್ಯಾಮೆರಾಮನ್ ಪ್ರಶಸ್ತಿಗೆ ಪಬ್ಲಿಕ್ ಟಿವಿಯ ಕ್ಯಾಮೆರಾಮನ್ ಈ ಕಾರ್ತಿಕ್ ಅವರು ಗೌರವಕ್ಕೆ ಪಾತ್ರರಾಗಿದ್ದಾರೆ.

ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಇದೇ ತಿಂಗಳು ಆಯೋಜಿಸುವ ಪತ್ರಿಕಾ ಕಾರ್ಯಕ್ರಮದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೈ ಸಾಧಕ  ಪತ್ರಕರ್ತರನ್ನು ಗೌರವಿಸಲಾಗುವುದು ಎಂದು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ತಿಳಿಸಿದ್ದಾರೆ.

Key words: Journalists -annual award – Mysore- District- Journalists Association

website developers in mysore