ಜಿಂದಾಲ್ ನಿಂದ ಬಿಎಸ್ ವೈ 20 ಕೋಟಿ ರೂ. ಚೆಕ್ ಪಡೆದ ಆರೋಪ: ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಬಿವೈ  ವಿಜಯೇಂದ್ರ…

Promotion

ಶಿವಮೊಗ್ಗ,ಜೂ,18,2019(www.justkannada.in):  ಜಿಂದಾಲ್ ಕಂಪನಿಯಿಂದ ಬಿಎಸ್ ಯಡಿಯೂರಪ್ಪ 20 ಕೋಟಿ ರೂ ಚೆಕ್ ಪಡೆದಿದ್ದರು ಎಂದು ಆರೋಪಿಸಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಬಿಎಸ್ ವೈ ಪುತ್ರ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿವೈ ವಿಜಯೇಂದ್ರ, ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಿಟ್ ಅಂಡ್ ರನ್ ಸಂಸ್ಕೃತಿಯಿಂದ ಹೊರಬರಲಿ. ಇಂತಹ ಹೇಳಿಕೆಗಳನ್ನ ಬಿಟ್ಟು ಸಿಎಂ ಘನತೆಯನ್ನ ಕಾಪಾಡಲಿ. ಜನರಿಗೆ ಸುಳ್ಳು ಭರವಸೆ ನೀಡಿ ದಾರಿತಪ್ಪಿಸಿದ್ದಾಯಿತು. ಈಗ ತಮ್ಮ ತಪ್ಪನ್ನ ಮುಚ್ಚಿಕೊಳ್ಳಲು ಬಿಎಸ್ ಯಡಿಯೂರಪ್ಪ ವಿರುದ್ದ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಿನ್ನೆ ರಾಮನಗರದಲ್ಲಿ ಮಾತನಾಡಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಜಿಂದಾಲ್ ಕಂಪನಿಯಿಂದ ಬಿಎಸ್ ಯಡಿಯೂರಪ್ಪ 20 ಕೋಟಿ ರೂ. ಚೆಕ್ ಪಡೆದಿದ್ದರು ಎಂದು ಆರೋಪಿಸಿದ್ದರು.

Key words: Jindal- exceeds -Rs 20 crore -BY Vijayendra- CM HD Kumaraswamy.