ಹೆಚ್.ಡಿಕೆಗೆ ಹತಾಶೆ: ಕೆಲವೇ ದಿನಗಳಲ್ಲಿ ಜೆಡಿಎಸ್ ಪಕ್ಷ ಇಬ್ಭಾಗ- ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿಕೆ.

Promotion

ನವದೆಹಲಿ,ಫೆಬ್ರವರಿ,7,2023(www.justkannada.in): ಕೆಲವೇ ದಿನಗಳಲ್ಲಿ ಜೆಡಿಎಸ್ ಪಕ್ಷ ಇಬ್ಭಾಗವಾಗಲಿದ್ದು, ಎರಡು ಬಣಗಳಾಗಲಿದೆ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಭವಿಷ್ಯ ನುಡಿದರು.

ನವದೆಹಲಿಯಲ್ಲಿ ಇಂದು ಮಾತನಾಡಿದೆ ಶಾಸಕ ಎಂ.ಪಿ ರೇಣುಕಾಚಾರ್ಯ,  ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಯಾರು ಸಿಎಂ ಆಗ್ತಾರೆ ಅನ್ನೋದು ಅಪ್ರಸ್ತುತ. ಪ್ರಹ್ಲಾದ್ ಜೋಶಿ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದವರು. ಹಿಂದುಳಿದ ವರ್ಗದ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡಲು ಕುಮಾರಸ್ವಾಮಿ ಯಾರು..? ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಆಕಸ್ಮಿಕವಾಗಿ ಸಿಎಂ ಆದವರು. ಹೆಚ್.ಡಿಕೆ ಸಿಎಂ ಆಗಿ ಅಧಿಕಾರ ಅನುಭವಿಸಿದ್ದಾರೆ. ಜೆಡಿಎಸ್ ಕಥೆ ಮುಗಿಯುತ್ತಿದ್ದು ಹೆಚ್.ಡಿ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಕೆಲವೇ ದಿನಗಳಲ್ಲಿ ಜೆಡಿಎಸ್ ಪಕ್ಷ ಎರಡು ಭಾಗ ಆಗಲಿದೆ. ಕುಮಾರಸ್ವಾಮಿ ಬಣ ಮತ್ತು ಭವಾನಿ ರೇವಣ್ಣ ಬಣ ಆಗಲಿದೆ. ಜೆಡಿಎಸ್ ಪಕ್ಷ ಹೆಚ್ ಡಿಕೆ ನಿಯಂತ್ರಣದಲ್ಲಿಇಲ್ಲ ಎಂದು ಟೀಕಿಸಿದರು.

Key words: JDS party -split – few days- MLA -MP Renukacharya