ಹಿಂದಿ ದಿವಸ್ ವಿರೋಧಿಸಿ ಮಾಜಿ ಸಿಎಂ ಹೆಚ್.ಡಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್ ಶಾಸಕರು.

Promotion

ಬೆಂಗಳೂರು ಸೆಪ್ಟಂಬರ್ 14,2022(www.justkannada.in):  ರಾಜ್ಯದಲ್ಲಿ ಹಿಂದಿ ದಿವಸ್ ಆಚರಣೆ ವಿರೋಧಿಸಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ಪ್ರತಿಭಟನೆ ನಡೆಸಿದರು.

ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಜೆಡಿಎಸ್‌ ಶಾಸಕರು ಪ್ರತಿಭಟನೆ ನಡೆಸಿದರು.  ‘ನಮಗೆ ಹಿಂದಿ ದಿವಸ್ ಬೇಕಿಲ್ಲ, ಹಿಂದಿ ಹೇರಿಕೆ ನಿಲ್ಲಿಸಿ’ ಎಂದು ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್  ಶಾಸಕರು ನಾಮಫಲಕ ಹಿಡಿದು ಪ್ರತಿಭಟಿಸಿದರು.

ಜೆಡಿಎಸ್‌ನಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ಇಂದು ಮಧ್ಯಾಹ್ನ ಬೆಂಗಳೂರಿನ ಜೆಡಿಎಸ್‌ ಕಚೇರಿ ಮುಂದೆಯು ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ಈ ವೇಳೆ ಜೆಡಿಎಸ್‌  ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಟಿ.ಎ ಶರವಣ ಶಾಸಕರಾದ ಅನ್ನದಾನಿ,ಸಾರಾ ಮಹೇಶ್ ಸೇರಿದಂತೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

Key words: JDS -MLAs –protest- against- Hindi Divas