‘ಕೈ-ದಳ’ ಭಾಯಿಭಾಯಿ!? ಮೈಸೂರು ಮಹಾನಗರ ಪಾಲಿಕೆಗೆ ಮತ್ತೆ ಜೆಡಿಎಸ್ ಮೇಯರ್ ?

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ಶುರುವಾಗಿದೆ.

ಜಿಡಿಎಸ್ ಗೆ ಮೇಯರ್ ಸ್ಥಾನಕ್ಕೆ ಜೆಡಿಎಸ್ ಪಾಲಿಕೆ ಸದಸ್ಯರ ಪಟ್ಟು ಹಿಡಿದಿದ್ದಾರೆ. ಬಹುತೇಕ ಪಾಲಿಕೆ ಸದಸ್ಯರು ಕಾಂಗ್ರೆಸ್ ಜೊತೆ ಮೈತ್ರಿ ಎಂದಿನಂತೆ ಮುಂದುವರೆಸಲು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕೆಲವರು ಬಿಜೆಪಿಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದ್ರೆ ಮೇಯರ್ ಮಾತ್ರ ಜೆಡಿಎಸ್ ಸದಸ್ಯರೇ ಆಗಬೇಕೆಂದು ಜೆಡಿಎಸ್ ಸದಸ್ಯರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಮೇಯರ್ ಚುನಾವಣೆಯಲ್ಲಿ ಜಿಡಿಎಸ್ ಅಭ್ಯರ್ಥಿ ಬಹುತೇಕ ಖಚಿತ ಎನ್ನಲಾಗಿದೆ. ಈ ಕುರಿತು ಪಾಲಿಕೆ ಸದಸ್ಯರ ಅಭಿಪ್ರಾಯವನ್ನು ಸಾ ರಾ ಮಹೇಶ್ ಸಂಗ್ರಹ ಮಾಡಿದ್ದಾರೆ.

ಕಾಂಗ್ರೆಸ್ ಮೈತ್ರಿ ಮುಂದುವರಿಕೆ ಬಿನ್ನಭಿಪ್ರಾಯ ವ್ಯಕ್ತವಾಗಿದೆ. ಮೇಯರ್ ಸ್ಥಾನದಿಂದ ಇಳಿಯಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಗೆ ಮೇಯರ್ ಕೊಟ್ಟು ಚುನಾವಣೆ ಯಲ್ಲಿ ಎದುರಿಸಲು ಹೇಗೆ ಸಾಧ್ಯ ಎಂದು ಕೆಲವರು ಪ್ರಶ್ನಿಸಿದ್ದಾರೆ. ಎಲ್ಲರ ಅಭಿಪ್ರಾಯ ವರಿಷ್ಠರ ಗಮನಕ್ಕೆ ತಂದು ಇನ್ನೆರಡು ದಿನದಲ್ಲಿ ಅಂತಿಮ‌ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.