ಮಂಡ್ಯ ಮತ್ತು ಹಾಸನಕ್ಕೆ  ಮಾತ್ರ ಸೀಮಿತವಾಗಿರುವ ಜೆಡಿಎಸ್ ಮತ್ತಷ್ಟು ಕುಗ್ಗೋದು ಬೇಡ – ಸಚಿವ ಆರ್.ಅಶೋಕ್ ಲೇವಡಿ.

Promotion

ಬೆಂಗಳೂರುಮಾರ್ಚ್,17,2023(www.justkannada.in): ಮೊದಲು ಜೆಡಿಎಸ್ ರಾಜ್ಯಕ್ಕೆ ಸೀಮಿತವಾಗಿತ್ತು. ನಂತರ ಮಂಡ್ಯ ಹಾಸನಕ್ಕೆ ಸೀಮಿತವಾಗಿದೆ. ಹೆಚ್.ಡಿ ಕುಮಾರಸ್ವಾಮಿ  ಹೆಚ್.ಡಿ ದೇವೇಗೌಡರು ಒಂದು ವರ್ಗಕ್ಕೆ ಸೀಮಿತರಾಗಿದ್ದಾರೆ.  ಜೆಡಿಎಸ್ ಇನ್ನಷ್ಟು ಕುಗ್ಗಿ ಜಿಲ್ಲೆಗೆ  ಸೀಮಿತವಾಗೋದು ಬೇಡ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.

ಉರಿಗೌಡ ನಂಜೇಗೌಡ ಸಿನಿಮಾಗೆ ಎಚ್ ಡಿಕೆ ವಿರೋಧ ಕುರಿತು ಮಾತನಾಡಿದ  ಆರ್. ಅಶೋಕ್, ಒಕ್ಕಲಿಗರನ್ನ ಹೀಯಾಳಿಸುವ ಉದ್ದೇಶವಿಲ್ಲ ನಾವೂ ಒಕ್ಕಲಿಗ ಸಮಾಜದಿಂದ ಬಂದವರು ಬಿಜೆಪಿ  ಇತಿಹಾಸ ಪರವಾಗಿ ನಿಲ್ಲುತ್ತದೆ. ಉರಿಗೌಡ ನಂಜೇಗೌಡರ ಬಗ್ಗೆ ಅಶ‍್ವಥ್ ನಾರಾಯಣ್ ಹೇಳಿದ್ದಾರೆ  ಇತಿಹಾಸ ಏನು ಅಂತಾ ನೋಡುತ್ತೇನೆ. ಹೆಚ್ ಡಿಕುಮಾರಸ್ವಾಮಿಗೆ ಅನುಮಾನವಿದ್ದರೇ ಇತಿಹಾಸವನ್ನ ಮತ್ತೊಮ್ಮೆ ಪರಿಶೀಲಿಸೋಣ ಎಂದರರು.

ಯಾರೂ ಸಮುದಾಯವನ್ನ ಗುತ್ತಿಗೆ ಪಡೆಯಲು ಆಗಲ್ಲ. ಕುಮಾರಸ್ವಾಮಿ ಪದೇ ಪದೇ ಜಾತಿ ಹೆಸರು ಹೇಳುವುದು. ಜಾತಿ ಹೆಸರಲ್ಲಿ ಮತ ಕೇಳುವ ಗಿಮಿಕ್ ಮಾಡಬಾರದು ಎಂದು ಆರ್.ಅಶೋಕ್ ಟಾಂಗ್ ನೀಡಿದರು.

Key words: JDS- limited – Mandya – Hassan – Minister -R. Ashok