ಮೊದಲು ಜೆಡಿಎಸ್, ಈಗ ಕಾಂಗ್ರೆಸ್  ನನ್ನ ಬಗ್ಗೆ ಮಾತನಾಡಿ ಮೈಲೇಜ್ ತೆಗೆದುಕೊಳ್ತಿದ್ದಾರೆ- ಸಂಸದೆ ಸುಮಲತಾ ಅಂಬರೀಶ್ ಟಾಂಗ್.

Promotion

ಮಂಡ್ಯ,ಮಾರ್ಚ್,24,2023(www.justkannada.in):  ಸುಮಲತಾ ಸ್ವಾಭಿಮಾನ ಪದ ಬಳಸಬಾರದು ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ಭಾರತದಲ್ಲಿಲ್ವಾ..?  ಬಿಜೆಪಿ 8 ವರ್ಷದಿಂದ ದೇಶವನ್ನಾಳುತ್ತಿದೆ. ಒಂದು ಪಕ್ಷಕ್ಕೆ  ಹೋದ್ರೆ ಸ್ವಾಭಿಮಾನ ಇಲ್ಲ. ಇನ್ನೊಂದು ಪಕ್ಷಕ್ಕೆ ಹೋದ್ರೆ ಸ್ವಾಭಿಮಾನ ಇದೆ ಅಂತಾನಾ..? ಎಂದು ಪ್ರಶ್ನಿಸಿದರು.

ನನ್ನ  ಬಗ್ಗೆ ಮಾತನಾಡಿದ್ರೆ ಮೈಲೇಜ್ ಹೆಚ್ಚಾಗುತ್ತದೆ. ಮೊದಲು ಜೆಡಿಎಸ್ ನವರು ಮಾತನಾಡಿದರು ಮಾತಾಡಿ ಮೈಲೇಜ್ ತೆಗೆದುಕೊಂಡರು . ಈಗ ಕಾಂಗ್ರೆಸ್ ನವರು ಮಾತನಾಡಿ ಮೈಲೇಜ್ ತೆಗದುಕೊಳ್ಳುತ್ತಿದ್ದಾರೆ ಎಂದು ಕುಟುಕಿದರು.

ತಾವು ರಾಜ್ಯ ರಾಜಕೀಯಕ್ಕೆ ಬರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದೆ ಸುಮಲತಾ ಅಂಬರೀಶ್,  ನಾನಿನ್ನೂ ರಾಜ್ಯ ರಾಜಕೀಯದ ಬಗ್ಗೆ ಯೋಚಿಸಿಲ್ಲ ನಾನು ಬಿಜೆಪಿಯಿಂದ ಟಿಕೆಟ್ ಕೇಳಿಲ್ಲ. ಬಿಜೆಪಿ ಎದುರು ನಾನು ಯಾವುದೇ ಬೇಡಿಕೆ ಇಟ್ಟಿಲ್ಲ.  ಪಕ್ಷದಲ್ಲಿ ಏನೆಲ್ಲಾ ಚರ್ಚೆ ಆಗುತ್ತೆ ಎಂಬುದನ್ನು ಗಮನಿಸಿ ಅಮೇಲೆ  ನಿರ್ಧಾರ ಮಾಡುತ್ತೇನೆ ಎಂದರು.

Key words: JDS-Congress – mileage -talking –about- me- MP- Sumalata Ambarish