ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಶತಸಿದ್ದ- ಶಾಸಕ ನಾಗೇಂದ್ರ

Promotion

ಮೈಸೂರು,ಡಿಸೆಂಬರ್,21,2020(www.justkannada.in): ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಶತಸಿದ್ದ ಎಂದು ಬಿಜೆಪಿ ಶಾಸಕ ನಾಗೇಂದ್ರ ತಿಳಿಸಿದ್ದಾರೆ.Teachers,solve,problems,Government,bound,Minister,R.Ashok

ಈ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿದ ಶಾಸಕ ನಾಗೇಂದ್ರ, ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ  ನೂರಕ್ಕೆ ಇನ್ನೂರು ಭಾಗ ಮೈತ್ರಿ ಆಗುತ್ತೆ. ಕಾಂಗ್ರೆಸ್ ನವರ ಒಳ ಜಗಳದಿಂದ ಜೆಡಿಎಸ್ ನವರು ಬೇಸತ್ತಿದ್ದಾರೆ. ಅಧಿಕಾರ ನಡೆಸಲು ಕಾಂಗ್ರೆಸ್ ನಾಯಕರು ಬಿಟ್ಟಿಲ್ಲ. ನಮ್ಮೊಟ್ಟಿಗೆ ಈಗಾಗಲೇ ಮಾತುಕತೆ ಆಗಿದೆ ಎಂದು ಹೇಳಿದರು.jds-bjp-alliance-mysore-city-corporation-election-mla-nagendra

ಪಾಲಿಕೆಯಲ್ಲಿ ಹೆಚ್ಚು ಸದಸ್ಯರು ಹೊಂದಿರುವರಿಗೆ ಮೇಯರ್ ಸ್ಥಾನ ನೀಡಿ. ಮೇಯರ್ ಸ್ಥಾನ ಬಿಜೆಪಿಯವರಿಗೆ ನೀಡಬೇಕು. ಈ ಒತ್ತಾಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ನಾಗೇಂದ್ರ  ತಿಳಿಸಿದರು.

Key words: JDS-BJP -alliance – Mysore city corporation-election – MLA- nagendra