ಫೆ.24 ರಂದು ಜಯಚಾಮರಾಜೇಂದ್ರ ಒಡೆಯರ್ ಜನ್ಮ ಶತಮಾನೋತ್ಸವ: ಮೂರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್..

Promotion

ಮೈಸೂರು,ಫೆ,18,2020(www.justkannada.in): ಫೆಬ್ರವರಿ 24 ರಂದು ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು ಜಯಚಾಮರಾಜೇಂದ್ರ ಒಡೆಯರ್ ರಚಿಸಿರುವ ಕೃತಿಯನ್ನ ಅಂದು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ತಿಳಿಸಿದ್ದಾರೆ.

ಮೈಸೂರು ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ  ಮಾತನಾಡಿದ  ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್  ಮೂರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಫೆ.24ರಂದು ಮೈಸೂರು ವಿವಿ ಸೆನೆಟ್ ಭವನದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಅಂದು ಜಯಚಾಮರಾಜೇಂದ್ರ ಒಡೆಯರ್ ರಚಿಸಿರುವ ಕೃತಿ ಲೋಕರ್ಪಣೆ ಮಾಡಲಾಗುತ್ತದೆ. ಅರಮನೆಯ ಗಂಧದ ತೊಟ್ಟಿಯ ಸಂರಕ್ಷಣಾ ಕಾರ್ಯ ನಡೆಯಲಿದೆ. ಮೂರು ಕಾರ್ಯಕ್ರಮಗಳನ್ನ ಮೈಸೂರು ಅರಮನೆಯಿಂದ ನಡೆಸುತ್ತಿದ್ದೇವೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

Key words: Jayachamarajendra Wodeyar-janma shathamanotsava-mysore-feb 24-pramoda devi odeyar