ಸಖತ್ ಸದ್ದಿಯಾದ ಜಸ್ಪ್ರೀತ್ ಬೂಮ್ರಾ ಹೊಸ ಫೋಟೋಶೂಟ್ !

Promotion

ಬೆಂಗಳೂರು, ಡಿಸೆಂಬರ್ 27, 2019 (www.justkannada.in): ಮುಂಬರುವ ಶ್ರೀಲಂಕಾ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ಜಸ್ಪ್ರೀತ್ ಬೂಮ್ರಾ ಕಮ್​ಬ್ಯಾಕ್ ಮಾಡುತ್ತಿದ್ದಾರೆ.

ಇದರ ಜತೆಗೆ ಮತ್ತೊಂದು ವಿಷಯಕ್ಕೆ ಬೂಮ್ರಾ ಸುದ್ದಿಯಾಗಿದ್ದಾರೆ. ಸದ್ಯ ಆಫ್ ದಿ ಫೀಲ್ಡ್​ನಲ್ಲಿ ಫುಲ್ ಬ್ಯೂಸಿಯಾಗಿರುವ ಬೂಮ್ರಾ ಹೊಸ ಫೋಟೋ ಶೂಟ್ ಗಮನ ಸೆಳೆದಿದೆ.

ಯಾವಾಗಲೂ ಫಿಟ್ನೆಸ್, ಟ್ರೈನಿಂಗ್​ ಪೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡ್ತಿದ್ದ ಜೂಮ್ರಾ, ಈಗ ತಮ್ಮ ಸ್ಟೈಲಿಶ್ ಲುಕ್ಸ್ ಇರುವ ಫೋಟೋಗಳನ್ನ ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬೂಮ್ರಾರ ಫ್ಯಾಶನ್ ಮತ್ತು ಸ್ಟೈಲಿಶ್ ಲುಕ್ಸ್​​​ಗೆ, ಕ್ರಿಕೆಟ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ​ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.