ಕೊರೋನಾ ಭೀತಿ: ಹೊರರಾಜ್ಯದವರು ರಾಜ್ಯಕ್ಕೆ ಬರುವುದನ್ನ ತಡೆಗಟ್ಟಲು ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಕೊಟ್ಟ ಸಲಹೆ ಏನು ಗೊತ್ತೆ…?

ಮೈಸೂರು,ಮಾ,21,2020(www.justkannada.in): ಕೊರೋನಾ ಸೋಂಕು ಹರಡುವ ಭೀತಿ ಹೆಚ್ಚಾದ ಹಿನ್ನೆಲೆ ಹೊರರಾಜ್ಯದಿಂದ ಬರುವವರು ರಾಜ್ಯ ಪ್ರವೇಶ ಮಾಡದಂತೆ ನೋಡಿಕೊಳ್ಳಿ. ರಾಜ್ಯದ ಸುರಕ್ಷಿತೆ ದೃಷ್ಠಿಯಿಂದ ಗಡಿಗಳನ್ನೂ ಸೀಲ್ ಮಾಡಿ ಎಂದು ಸರ್ಕಾರಕ್ಕೆ ಮೈಸೂರು-ಕೊಡಗು  ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.

ಮೈಸೂರು ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ,  ಹೊರ ರಾಜ್ಯದವರು ಜಿಲ್ಲೆಗೆ ಬರುವುದನ್ನು ತಡೆಯಲು ಗಡಿಗಳನ್ನು ಬಂದ್ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದರು.

ಕೊರೋನಾ ಹರಡುವ ಭೀತಿ ಹಿನ್ನೆಲೆ ಭಾರತಕ್ಕೆ ವಿಮಾನಯಾನ ರದ್ದು ಮಾಡಲಾಗಿದೆ. ಅದೆ ರೀತಿ ರಾಜ್ಯಕ್ಕೆ ಹೊರರಾಜ್ಯದ ಗಡಿಯಿಂದ ಬರುವವರನ್ನ ತಡೆಯವ ಪ್ರಯತ್ನ ಮಾಡಬೇಕಿದೆ. ಈ ಪ್ರಯತ್ನವನ್ನ ಹಿಮಾಚಲ ಪ್ರದೇಶ ಮಾಡಿದೆ. ಅದೆ ರೀತಿ ಕರ್ನಾಟಕ ಸುರಕ್ಷಿತೆ ದೃಷ್ಠಿಯಿಂದ ಗಡಿ ಸೀಲ್ ಮಾಡಿ. ಹೊರರಾಜ್ಯದಿಂದ ಸೊಂಕಿತರು ರಾಜ್ಯ ಪ್ರವೇಶ ಮಾಡದಂತೆ ನೋಡಿಕೊಳ್ಳಿ. ನಮ್ಮ ಜನರ ಸುರಕ್ಷಿತೆಯಿಂದ ಈ ಗಡಿ ಸೀಲ್ ಮಾಡುವ ಅವಶ್ಯಕತೆ ಇದೆ ಎಂದು ಸಿಎಂ ಬಿಎಸ್‌ವೈ‌ಗೆ ಸಂಸದ ಪ್ರತಾಪ್‌ಸಿಂಹ ಮನವಿ ಮಾಡಿದರು.

ಅಗತ್ಯವಿದ್ದರೆ ಮಾತ್ರ ಆರೋಗ್ಯ ತಪಾಸಣೆಗೆ ಹೊರಗಡೆ ಬನ್ನಿ….

ಕರೊನಾ ಹರಡದಂತೆ ಎಲ್ಲರೂ ಜನತಾ ಕರ್ಫ್ಯೂ  ಈ ನಿಯಮವನ್ನು ಪಾಲಿಸುವುದು ಅವಶ್ಯಕವಾಗಿದೆ. ಈಗಾಗಲೇ ಇದಕ್ಕೆ ಪಕ್ಷಾತೀತವಾಗಿ, ಧರ್ಮಾತೀತವಾಗಿ ಬೆಂಬಲ ನೀಡಿದ್ದಾರೆ. ದೇವಸ್ಥಾನ, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ 50 ಕ್ಕೂ ಹೆಚ್ಚು ಜನ ಸೇರದಂತೆ ಜಾಗೃತೆ ವಹಿಸಲಾಗಿದೆ ಎಂದು ಹಲವು ಧಾರ್ಮಿಕ ಮುಖಂಡರು ತಿಳಿಸಿದ್ದಾರೆ 10 ವರ್ಷದ ಒಳಪಟ್ಟ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯರು ಮನೆಯಿಂದ ಹೊರಗಡೆ ಬರಬಾರದು. ಅಗತ್ಯವಿದ್ದರೆ ಮಾತ್ರ ಆರೋಗ್ಯ ತಪಾಸಣೆಗೆ ಹೊರಗಡೆ ಬನ್ನಿ ಇಲ್ಲದಿದ್ದರೆ ಬರಬೇಡಿ. ಸಾಮಾನ್ಯ ಆರೋಗ್ಯ ತಪಾಸಣೆಯಿದ್ದರೆ ಆದಷ್ಟು ಮುಂದೂಡಿ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮನೆಯಲ್ಲೇ ಚಪ್ಪಾಳೆ ತಟ್ಟುವ ಕೃತಜ್ಞತೆ ಸಲ್ಲಿಸೋಣ

ಕರೊನಾ ಮಹಾಮಾರಿ ಮೂರನೇ ಹಂತಕ್ಕೆ ವಿಸ್ತರಣೆ ಆಗದಂತೆ ತಡೆಯಲು ಸಂಯಮ ಮತ್ತು ಸಂಕಲ್ಪದ ಅಗತ್ಯವಿದೆ. ದಿನಗೂಲಿ ನೌಕರರು ಹಾಗೂ ಕಾರ್ಮಿಕರ ಭತ್ಯೆಗಳನ್ನು ತಡೆಹಿಡಿಯಬೇಡಿ. ಕರೊನಾ ತಡೆಗಟ್ಟುವ ಸೇವೆಯಲ್ಲಿ ನಿರತರಾಗಿರುವ ಎಲ್ಲಾ ಸಿಬ್ಬಂದಿಗಳಿಗೆ ಮನೆಯಲ್ಲೇ ಚಪ್ಪಾಳೆ ತಟ್ಟುವ ಕೃತಜ್ಞತೆ ಸಲ್ಲಿಸೋಣ ಎಂದು ಪ್ರತಾಪ್ ಸಿಂಹ ಕರೆ ನೀಡಿದರು.

ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಎಲ್ಲಾ ವಾರ್ಡ್ ಗಳಲ್ಲಿ ಅಗತ್ಯ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಅಗತ್ಯ ಕಂಡುಬಂದಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರೆ ನಿಮ್ಮ ಮನೆ ಬಾಗಿಲಿಗೆ ಬಂದು ಸಹಾಯ ನೀಡಲಿದ್ದಾರೆ. ನಾಳೆಯಿಂದ ಕಾರ್ಯಕರ್ತರ ಪಡೆ ಸಾರ್ವಜನಿಕರ ಸೇವೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ಕರೆಗೆ ಓಗೊಟ್ಟು ಎಲ್ಲರೂ ಸ್ವಯಂ ಕರ್ಫ್ಯೂ ವಿಧಿಸಿಕೊಂಡು ಪ್ರಧಾನಿಯವರ ನಿರ್ಧಾರವನ್ನು ಬೆಂಬಲಿಸುವ ಅನಿವಾರ್ಯತೆ ಇದೆ. ಜನತಾ ಕರ್ಫ್ಯೂ ಆಚರಿಸುವುದರಿಂದ ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ನಾಗೇಂದ್ರ ಜಿಲ್ಲಾ ಅಧ್ಯಕ್ಷ ಟಿ. ಎಸ್. ಶ್ರೀವತ್ಸ, ಪಾಲಿಕೆ ವಿಪಕ್ಷ ಪಕ್ಷದ ಸುಬ್ಬಯ್ಯ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಭಾಗಿಯಾಗಿದ್ದರು.

Key words: Janata curfew-corona virus- mysore-MP- Prathap simha