ತಮ್ಮನ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್ ನೀಡಿದ ನವರಸ ನಾಯಕ!

Promotion

ಬೆಂಗಳೂರು, ಜುಲೈ 04, 2020 (www.justkannada.in): ನವರಸನಾಯಕ ಜಗ್ಗೇಶ್ ತಮ್ಮ ಸಹೋದರ ಕೋಮಲ್ ಕುಮಾರ್ ಜನ್ಮದಿನಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ.

ಕೋಮಲ್ ಇಂದು ಜನ್ಮದಿನ ಅಚರಿಸಿಕೊಳ್ಳುತ್ತಿದ್ದು, ತಮ್ಮನಿಗಾಗಿ ಅಣ್ಣ ಜಗ್ಗೇಶ್ ಹಳೆಯ ಫೋಟೋಗಳ ಆಲ್ಬಂಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಶುಭ ಕೋರಿದ್ದಾರೆ.

ಹಾಸ್ಯ ನಟನಾಗಿ ಬಳಿಕ ನಾಯಕನಾಗಿ ಮಿಂಚಿದ ಕೋಮಲ್ ಬರ್ತ್ ಡೇಗೆ ಅಭಿಮಾನಿಗಳೂ ಶುಭ ಕೋರುತ್ತಿದ್ದಾರೆ.