ಶಾರುಖ್​ ಖಾನ್​-ಗೌರಿಗೆ ಇಡಿ ಶಾಕ್ !

Promotion

ಮುಂಬೈ, ಫೆಬ್ರವರಿ 04, 2020 (www.justkannada.in): ಬಾಲಿವುಡ್​ ನಟ ಶಾರುಖ್​ ಖಾನ್​ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶಾಕ್​ ನೀಡಿದ್ದಾರೆ.

ಶಾರುಖ್​ ಒಡೆತನದ ಕೋಲ್ಕತ್ತ ನೈಟ್​ ರೈಡರ್ಸ್​ ಹಾಗೂ ರೋಸ್​ ವ್ಯಾಲಿ ಗ್ರೂಪ್​ಗೆ ಸೇರಿದ 70.11 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ.

ಪಶ್ಚಿಮ ಬಂಗಾಳ, ಮುಂಬೈ ಸೇರಿ ವಿವಿಧ ಭಾಗದಲ್ಲಿರುವ ಜಮೀನನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ 16.20 ಕೋಟಿ ರೂಪಾಯಿ ಬ್ಯಾಂಕ್​ ಅಕೌಂಟ್​ ಅನ್ನು ಸೀಜ್​ ಮಾಡಲಾಗಿದೆ.

ಇದರಲ್ಲಿ ಒಡೆತನದ ಕೋಲ್ಕತ್ತಾ ನೈಟ್​ ರೈಡರ್ಸ್​ಗೆ ಸಂಬಂಧಿಸಿದ ಆಸ್ತಿ ಕೂಡ ಇದೆ ಎನ್ನಲಾಗಿದೆ. ಶಾರುಖ್​ ಪತ್ನಿ ಕೋಲ್ಕತ್ತಾ ನೈಟ್​ ರೈಡರ್ಸ್​ ನಿರ್ದೇಶಕಿ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿ ಅವರಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಯಾವುದೇ ಕ್ಷಣದಲ್ಲೂ ಇಡಿ ಅವರನ್ನು ಕರೆಸಿ ವಿಚಾರಣೆ ನಡೆಸಬಹುದು.