ಮಂಗಳೂರು ಸೇರಿ ವಿವಿಧ ಕಡೆ ಚಿನ್ನಾಭರಣ ಮಳಿಗೆಗಳ ಮೇಲೆ ಐಟಿ ದಾಳಿ…

Promotion

ಮಂಗಳೂರು, ಜೂ.27,2019(www.justkannada.in):  ಮಂಗಳೂರು ಸೇರಿ ಹಲವು ಕಡೆಗಳಲ್ಲಿ ಚಿನ್ನಾಭರಣ ಮಳಿಗೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರಿನ ಕಂಕನಾಡಿಯಲ್ಲಿರುವ ಸುಲ್ತಾನ್ ಗೋಲ್ಟ್ ಮತ್ತು ಸಿಟಿ ಗೋಲ್ಡ್ ಎಂಬ ಚಿನ್ನಾಭರಣ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.  ಸುಲ್ತಾನ್ ಗೋಲ್ಡ್  ಕೇರಳಾ ಮೂಲದ ರವೂಫ್ ಎಂಬುವವರಿಗೆ ಸೇರಿದ ಮಳಿಗೆಯಾಗಿದೆ.

ಮಂಗಳೂರಿನಲ್ಲಲ್ಲದೇ  ಉಡುಪಿ ಶಿವಮೊಗ್ಗದಲ್ಲೂ ಐಟಿ ಅಧಿಕಾರಿಗಳು ಚಿನ್ನಾಭರಣ ಮಳಿಗೆ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಶಿವಮೊಗ್ಗದ ದುರ್ಗಗುಡಿಯಲ್ಲಿರುವ ಸುಲ್ತಾನ್ ಗೋಲ್ಡ್ ಮಳಿಗೆ ಮೇಲೆ ಬೆಂಗಳೂರಿನಿಂದ ಬಂದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Key words: IT -raids –  stores – Mangalore- Inspection