ಐಟಿ ದಾಳಿ ಪ್ರಕರಣ: ಸತತ ಮೂರು ಗಂಟೆಗಳ ಕಾಲ ವಿಚಾರಣೆ ಮುಗಿಸಿ ತೆರಳಿದ ನಟಿ ರಶ್ಮಿಕಾ ಮಂದಣ್ಣ…

Promotion

ಮೈಸೂರು,ಜ,21,2020(www.justkannada.in): ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ನೋಟೀಸ್ ನೀಡಿದ ಹಿನ್ನೆಲೆ ಇಂದು ಮೈಸೂರಿನಲ್ಲಿ ಐಟಿ ವಿಚಾರಣೆಗೆ ಹಾಜರಾಗಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ವಿಚಾರಣೆ ಮುಗಿಸಿ ತೆರಳಿದ್ದಾರೆ.

ನಗರದ ನಜರಬಾದ್ ನಲ್ಲಿರುವ ಪ್ರಧಾನ ಆದಾಯ ತೆರಿಗೆ ಆಯುಕ್ತರ ಕಚೇರಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ವಿಚಾರಣೆ ನಡೆಯಿತು.  ಸತತ ಮೂರು ಗಂಟೆಗಳ ಕಾಲ ವಿಚಾರಣೆ  ಎದುರಿಸಿದ ನಟಿ ರಶ್ಮಿಕಾ ಮಂದಣ್ಣ ಇದೀಗ ವಿಚಾರಣೆ  ಮುಗಿಸಿ ತಂದೆ ತಾಯಿಯ ಜೊತೆ ಕಾರಿನಲ್ಲಿ ತೆರಳಿದರು.

ಕಾರಿನ ಗಾಜಿಗೆ ಕಪ್ಪು ಹೊದಿಕೆ ಹಾಕಿಕೊಂಡು‌ ಮಾಧ್ಯಮಗಳಿಗೆ ಮುಖ ತೋರಿಸದೆ ರಶ್ಮಿಕಾ ಮಂದಣ್ಣ ತೆರಳಿದರು. ರಸ್ತೆಯಲ್ಲಿದ್ದ ಕಾರನ್ನು ಐಟಿ ಕಚೇರಿ ಸೆಲ್ಲರ್ ಒಳಗೆ ಕರೆಸಿಕೊಂಡು ರಶ್ಮಿಕಾ ಕುಟುಂಬ ತೆರಳಿತು. ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದರು. ನಂತರ ವಿಚಾರಣೆಗೆ ಹಾಜರಾಗುವಂತೆ ನಟಿ ರಶ್ಮಿಕಾ ಮಂದಣ್ಣ ಮತ್ತು ಕುಟುಂಬಸ್ಥರಿಗೆ ಐಟಿ ಅಧಿಕಾರಿಗಳು ನೋಟೀಸ್ ನೀಡಿದ್ದರು.

Key words: IT attack- Actress -Rashmika Mandanna- Inquiry-IT officer-mysore