ಹೆಚ್ಚುವರಿ ಕಾರ್ಯಾಧ್ಯಕ್ಷ ಹುದ್ದೆ ಸೃಷ್ಠಿ, ಸಿಎಲ್ ಪಿ ಮತ್ತು ವಿಪಕ್ಷ ನಾಯಕ ಸ್ಥಾನ ಪ್ರತ್ಯೇಕ ವಿಚಾರ: ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ…

ಬೆಂಗಳೂರು,ಜ,21,2020(www.justkannada.in): ಕೆಪಿಸಿಸಿಯಲ್ಲಿ  ಹೆಚ್ಚುವರಿ ಕಾರ್ಯಧ್ಯಕ್ಷರ ನೇಮಕಕ್ಕೆ ಅಭ್ಯಂತರವಿಲ್ಲ. ಸಿಎಲ್ ಪಿ ನಾಯಕ ಮತ್ತು ವಿಪಕ್ಷನಾಯಕ ಸ್ಥಾಣ ಪ್ರತ್ಯೇಕವಾಗಿದ್ದರೇ ಉತ್ತಮ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ಧರಾಮಯ್ಯಗೆ  ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಟಾಂಗ್ ನೀಡಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೆ.ಎಚ್ ಮುನಿಯಪ್ಪ, ಸಿದ್ಧರಾಮಯ್ಯ ಕಾಂಗ್ರೆಸ್ ಗೆ ಬಂದು 14 ವರ್ಷವಾಯ್ತು ಸಿದ್ಧರಾಮಯ್ಯಗೆ 14 ವರ್ಷದಿಂದ ಅಧಿಕಾರ ನೀಡಲಾಗಿದೆ. ಅವರಿಗಿಂತ ಅನುಭವ ಇರೋರು ಕಾಂಗ್ರೆಸ್ ನಲ್ಲಿ ಬಹಳ ಮಂದಿ ಇದ್ದಾರೆ. ಖರ್ಗೆ, ಕೋಳಿವಾಡ, ಹೆಚ್ಕೆ ಪಾಟೀಲ್ ನಾಯಕರು  40 ವರ್ಷದಿಂದ ಇದ್ದಾರೆ. ಯಾರೇ ಆಗಲಿ ತೀರ್ಮಾನ ಕೈಗೊಳ್ಳುವವರು ಸರಿಯಾಗಿದ್ದರೇ ಮೂಲ ವಲಸಿಗ ಎಂದು ಗೊಂದಲ ಸೃಷ್ಟಿಯಾಗಲ್ಲ ಎಂದರು.

ಸಮನ್ವಯ ಸಮಿತಿ ರಚನೆ ಎಂಬುವುದು ಹೊಸದೇನು ಅಲ್ಲ.  ಎಲ್ಲರೂ ಅಧ್ಯಕ್ಷರಾಗಲ್ಲ . ಎಲ್ಲರೂ ಸಿಎಲ್ ಪಿ ನಾಯಕರಾಗಲ್ಲ.  ಹಾಗೆಯೇ ಎಲ್ಲರೂ ವಿರೋಧ  ಸಮನ್ವಯ ಸಮಿತಿ ಹಿಂದೆಯೂ ಇದ್ದ ಉದಹಾರಣೆ ಇದೆ ಎಂದು ಕೆ.ಹೆಚ್ ಮುನಿಯಪ್ಪ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಚ ಸ್ಥಾನ ಹೈಕಮಾಂಡ್ ನಿರ್ಧರಿಸಲಿ. ಹಲವರು ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಆದರೆ ಈ ಬಗ್ಗೆ  ಪಕ್ಷದ ಹಿತದೃಷ್ಠಿಯಿಂದ ಬೇಗ ನಿರ್ಧಾರವಾಗಲಿ ಎಂದ ಕೆ.ಹೆಚ್ ಮುನಿಯಪ್ಪ, ನಾಲ್ವರು ಕಾರ್ಯಾಧ್ಯಕ್ಷರ ನೇಮಕಕ್ಕೆ ನಮ್ಮದೇನು ಅಭ್ಯಂತರ ಇಲ್ಲ. ಕೆಪಿಸಿಸಿಗೆ ನಾಲ್ವರು ಕಾರ್ಯಧ್ಯಕ್ಷರ ನೇಮಕ ಅಗತ್ಯವಿದೆ. ಒಂದೆರೆಡು ಕಾರ್ಯಧ್ಯಕ್ಷರು ಇರುವುದು ಸಹಜ. ಕಾರ್ಯಧ್ಯಕ್ಷರು ಇದ್ದರೇ ಸಮಸ್ಯೆ ಇಲ್ಲ. ಸಿಎಲ್ ಪಿ ನಾಯಕ ಮತ್ತು ವಿಪಕ್ಷನಾಯಕ ಸ್ಥಾನ ಪ್ರತ್ಯೇಕವಾಗಿದ್ದರೇ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Key words: CLP – Opposition Leader – Separate- Siddaramaiah- KH Muniyappa