ಇಸ್ರೋದಿಂದ ಮತ್ತೊಂದು ಸಾಧನೆ: ಪಿಎಸ್ ಎಲ್ ವಿ-ಸಿ47 ರಾಕೆಟ್ ಮೂಲಕ  14 ಉಪಗ್ರಹಗಳ ಉಡಾವಣೆ….

ಆಂಧ್ರ ಪ್ರದೇಶ,ನ,27,2019(www.justkannada.in): ಭಾರತೀಯ ಬಾಹ್ಯಕಾಶ ಸಂಸ್ಥೆ ಇದೀಗ ಮತ್ತೊಂದು ಸಾಧನೆ ಮಾಡಿದ್ದು  ಪಿಎಸ್ ಎಲ್ ವಿ-ಸಿ47 ರಾಕೆಟ್ ಮೂಲಕ  14 ಉಪಗ್ರಹಗಳನ್ನ ಉಡಾವಣೆ ಮಾಡಿದೆ.

ಅಧುನಿಕ ತಂತ್ರಜ್ಞಾನದ ಭೂ ವೀಕ್ಷಣೆಗೆ ಸಹಾಯಕಾರಿಯಾಗುವ ಕಾಟೋಸ್ಯಾಟ್ – 3 ಉಪಗ್ರಹ ಇಂದು ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ  ಉಡಾವಣೆ ಮಾಡಲಾಗಿದೆ. ಇದರ ಜತೆ  ಅಮೆರಿಕಾದ ವಾಣಿಜ್ಯೋಧ್ದೇಶದ 13 ನ್ಯಾನೋ ಉಪಗ್ರಹಗಳು ನಭಕ್ಕೆ ಜಿಗಿದಿವೆ.

ಪಿಎಸ್.ಎಲ್.ವಿ-ಸಿ 47 ರಾಕೆಟ್ ನಲ್ಲಿ ಈ 14 ಉಪಗ್ರಹಗಳನ್ನ ಯಶಸ್ವಿ ಉಡಾವಣೆ ಮಾಡಲಾಗಿದೆ. ಈ ಎಲ್ಲ ಉಪಗ್ರಹಗಳು ಸೂರ್ಯನ ಸ್ಥಿರ ಕಕ್ಷೆಗೆ ಸೇರಲಿವೆ. ಇನ್ನು ಕಾಟೋಸ್ಯಾಟ್ – 3 ಉಪಗ್ರಹ ಹೈರೆಸಲ್ಯೂಶನ್ ಇಮೇಂಜಿಂಗ್ ಸಾಮರ್ಥ್ಯ ಹೊಂದಿದ್ದು, ಇದು ಮೂರನೇ ತಲೆಮಾರಿನ ಅತ್ಯಾಧುನಿಕ ಸುಧಾರಿತ ಉಪಗ್ರಹವಾಗಿದೆ.

Key words: ISRO- launch – 14 satellites – PSLV-C47 -rocket