ಐಸಿಸ್ ಮುಖ್ಯಸ್ಥ ಬಾಗ್ದಾದಿ ಹತ್ಯಗೈದ ಅಮೆರಿಕಾ ಸೇನೆ

Promotion

ವಾಷಿಂಗ್ಟನ್, ಅಕ್ಟೋಬರ್ 27, 2019 (www.justkannada.in): ಸಿರಿಯಾದಲ್ಲಿ ಯುಎಸ್ ಮಿಲಿಟರಿ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಬಾಗ್ದಾದಿ ಸಾವನ್ನಪ್ಪಿದ್ದಾನೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಬೆಳಗ್ಗೆ 9 ಗಂಟೆಗೆ (06:30 PM IST) ಪ್ರಮುಖ ಘೋಷಣೆ ಮಾಡಲಿದ್ದಾರೆ ಎಂದು ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ಹೊಗನ್ ಗಿಡ್ಲಿ ಪ್ರಕಟಿಸಿದ್ದಾರೆ.

ವಾಯುವ್ಯ ಸಿರಿಯಾದಲ್ಲಿ ಶನಿವಾರ ಯುಎಸ್ ಮಿಲಿಟರಿ ನಡೆಸಿದ ದಾಳಿಯಲ್ಲಿ ಐಸಿಸ್ ನಾಯಕ ಅಬೂಬಕರ್ ಅಲ್-ಬಾಗ್ದಾದಿ ಸಾವನ್ನಪ್ಪಿದ್ದಾನೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಆತನ ಡಿಎನ್‌ಎ ಮತ್ತು ಬಯೋಮೆಟ್ರಿಕ್ ಪರೀಕ್ಷೆ ನಡೆಸಿದ ಬಳಿಕ ಅಧಿಕೃತ ಘೋಷಣೆಯಾಗಲಿದೆ ಎನ್ನಲಾಗಿದೆ.