ಐಪಿಎಲ್: ಇಂದು ಕಿಂಗ್ಸ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಹೋರಾಟ

Promotion

ಬೆಂಗಳೂರು, 23 ಏಪ್ರಿಲ್ 2021 (www.justkannada.in): ಇಂದು ಕಿಂಗ್ಸ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಗೆಲುವಿಗಾಗಿ ಪೈಪೋಟಿ ನಡೆಯಲಿದೆ.

ಸತತ ಸೋಲಿನಿಂದ ಕಂಗೆಟ್ಟಿರುವ ಪಂಜಾಬ್ ಮುಂಬೈವಿರುದ್ಧ ಗೆಲ್ಲಲು ಸರ್ವಾಂಗೀಣ ಪ್ರದರ್ಶನ ಹೊರತರಲೇಬೇಕು.

14ನೇ ಸೀಸನ್ ನಲ್ಲಿ ಪಂಜಾಬ್ ಸತತ ಸೋಲುಗಳ ಸರಣಿಯಿಂದ ಕಳಚಿಕೊಳ್ಳಲು ಯತ್ನಿಸಬೇಕಿದೆ. ಕಳೆದ ಪಂದ್ಯವನ್ನು ಗೆದ್ದಿರುವ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಪಂಜಾಬ್ ಮುಂಬೈ ವಿರುದ್ಧ ಗೆದ್ದು ಲಯಕ್ಕೆ ಮರಳಲು ಯತ್ನಿಸಬೇಕಿದೆ.

ಕಳೆದ ಪಂದ್ಯವನ್ನು ಸೋತ ಮುಂಬೈಗೆ ಈ ಬಾರಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.