101ನೇ ವಾರ್ಷಿಕ ಘಟಿಕೋತ್ಸವ ಸಂಬಂಧ ಪದವಿ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ..

ಮೈಸೂರು,ಏಪ್ರಿಲ್,23,2021(www.justkannada.in):  101ನೇ ವಾರ್ಷಿಕ ಘಟಿಕೋತ್ಸವ ಸಂಬಂಧ ಪದವಿ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮೈಸೂರು ವಿಶ್ವ ವಿದ್ಯಾನಿಲಯ ವಿಸ್ತರಣೆ ಮಾಡಿದೆ.jk

ಈ ಕುರಿತು ಆದೇಶ ಹೊರಡಿಸಿರುವ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ ಜ್ಞಾನ ಪ್ರಕಾಶ್, ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ 101ನೇ ವಾರ್ಷಿಕ ಘಟಿಕೋತ್ಸವವನ್ನು ಮುಂದೂಡಲಾಗಿದ್ದು, ಮುಂದೆ ನಡೆಯುವ ಘಟಿಕೋತ್ಸವದಲ್ಲಿ ಪದವಿ ಪತ್ರಗಳನ್ನ ಪಡೆಯುವ ಸೆಪ್ಟಂಬರ್/ಅಕ್ಟೋಬರ್ 2021ರ ಮಾಹೆಯಲ್ಲಿ ತೇರ್ಗಡೆಯಾದ ಸ್ನಾತಕ ಮತ್ತು ಸ್ನಾತಕೋತ್ತರ ಹಾಗೂ ಪಿಹೆಚ್.ಡಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರಗಳಿಗಾಗಿ ನಿಗದಿತ ಶುಲ್ಕದೊಂದಿಗೆ 2 ಭಾವಚಿತ್ರ ಒಳಗೊಂಡಂತೆ ಅರ್ಜಿ ಸಲ್ಲಿಸಲು ಮುಂದಿನ ದಿನಾಂಕ ಸೂಚಿಸುವವವರೆಗೂ ಅವಧಿಯನ್ನ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ. 101st annual gatikotsava—Convocation- Degree –Certificates- Extension

Key words: 101st annual gatikotsava—Convocation- Degree –Certificates- Extension