ಐಪಿಎಲ್‌: ಇಂದು ರಾಯಲ್ ಚಾಲೆಂಜರ್ಸ್ ವರ್ಸಸ್ ರಾಜಸ್ಥಾನ್ ರಾಯಲ್ಸ್ ಮುಖಾಮುಖಿ

Promotion

ಬೆಂಗಳೂರು. ಸೆಪ್ಟೆಂಬರ್ 29, 2021 (www.justkannada.in): ಐಪಿಎಲ್‌ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವಿಗಾಗಿ ಪೈಪೋಟಿ ನಡೆಸಲಿದೆ.

ಈವರೆಗೆ ಆಡಿರುವ 10 ಪಂದ್ಯಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಅಂಕಗಳನ್ನು ಪಡೆದುಕೊಂಡಿದೆ. ಆರು ಪಂದ್ಯಗಳಲ್ಲಿ ವಿರಾಟ್ ಪಡೆ ಗೆದ್ದಿದ್ದರೆ ನಾಲ್ಕು ಸೋಲು ಕಂಡಿದೆ.

ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಕೂಡ ಪ್ಲೇಆಫ್‌ಗೇರುವ ಸರ್ವ ಪ್ರಯತ್ನಗಳನ್ನು ಕೂಡ ನಡೆಸುತ್ತಿದೆ. ಆದರೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದರೆ ಮಾತ್ರವೇ ಆರ್‌ಆರ್‌ಗೆ ಇದು ಸಾಧ್ಯವಾಗಲಿದೆ.

ಹೀಗಾಗಿ ಪ್ಲೇ ಆಫ್ ತಲುಪಲು ಎರಡೂ ತಂಡಗಳಿಗೂ ಗೆಲುವು ಅನಿವಾರ್ಯವಾಗಿದ್ದು, ಪಂದ್ಯದಲ್ಲಿ ಕಠಿಣ ಪೈಪೋಟಿ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡುವ ನಿರೀಕ್ಷೆ ಇದೆ.

key words: IPL: Royal Challengers vs. Rajasthan Royals match today