ಐಪಿಎಲ್: ಆಸ್ಟ್ರೇಲಿಯಾ, ಇಂಗ್ಲೆಂಡ್​ ಆಟಗಾರರಿಗೆ ಕ್ವಾರಂಟೈನ್ ತಲೆನೋವು !

Promotion

ದುಬೈ, ಸೆಪ್ಟೆಂಬರ್ 17, 2020 (www.justkannada.in): ಸೆಪ್ಟೆಂಬರ್‌ 19ರಿಂದ ಐಪಿಎಲ್​ ಆರಂಭಗೊಳಲ್ಲಿದೆ. ಈ ನಡುವೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ಆಟಗಾರರು ಯುಎಇಗೆ ಆಗಮಿಸಿದ ವೇಳೆ ಕ್ವಾರಂಟೈನ್​ ಅವಧಿ ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ.

ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಆಡಲಿವೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ತಂಡಗಳ ನಡುವಿನ 3ನೇ ಏಕದಿನ ಪಂದ್ಯ ಸೆಪ್ಟೆಂಬರ್​ 16ರಂದು ನಡೆಯಲಿದೆ.

ಬಯೋಬಬಲ್​ನಲ್ಲಿರುವ 2 ದೇಶಗಳ ಆಟಗಾರರು ಕ್ವಾರಂಟೈನ್​ ಅವಧಿಯನ್ನು 3 ದಿನಗಳಿಗೆ ಇಳಿಸಲು ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಯುಎಇಗೆ ಆಗಮಿಸಿದ ನಂತರ ಆರು ದಿನಗಳ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಅಂದರೆ ನಾವು ಮೊದಲ ಪಂದ್ಯದಿಂದ ಆಡಲು 6 ದಿನಗಳ ಮುಂಚಿತವಾಗಿ ಅಲ್ಲಿರಬೇಕು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕ್ವಾರಂಟೈನ್ ಅವಧಿ ಕಡಿಮೆ ಮಾಡುವಂತೆ ಕೆಲವು ಆಟಗಾರರು ಮನವಿ ಮಾಡಿದ್ದಾರೆ.