ಐಪಿಎಲ್ ಪ್ರಾಕ್ಟೀಸ್ ನಡುವೆ ಈಜುಕೊಳದಲ್ಲಿ ಕಿಂಗ್ ಕೊಹ್ಲಿ ರಿಲ್ಯಾಕ್ಸ್ !

ದುಬೈ, ಸೆಪ್ಟೆಂಬರ್ 17, 2020 (www.justkannada.in):
ಈಜುಕೊಳದಲ್ಲಿ ರಿಲ್ಯಾಕ್ಸ್ ಮಾಡಿರುವ ಕೊಹ್ಲಿ, ಹಲವು ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಯೆಸ್! ಕೊಹ್ಲಿ ಈಜುಕೊಳದಲ್ಲಿರುವ ಚಿತ್ರಗಳು ಇದೀಗ ವೈರಲ್ ಆಗಿದ್ದು, ಬಾಲಿವುಡ್ ನಟರ ಗಮನಸೆಳೆದಿವೆ.

ಐಪಿಎಲ್ ಅಭ್ಯಾಸದ ನಡುವೆಯೂ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ ಕೊಹ್ಲಿ,
ಸಹ ಆಟಗಾರರಾದ ಕರ್ನಾಟಕದ ದೇವದತ್ ಪಡಿಕಲ್, ಪವನ್ ನೇಗಿ, ಗುರುಕೀರತ್ ಸಿಂಗ್ ಮಾನ್ ಜತೆಗೂಡಿ ಈಜುಕೊಳದಲ್ಲಿ ಕಾಲಕಳೆದಿದ್ದಾರೆ.

ಕೊಹ್ಲಿ ಫೋಟೋ ವೀಕ್ಷಿಸಿದ ನಟ ವರುಣ್ ಧವನ್, ಕೊಹ್ಲಿ ದೈಹಿಕ ಸಾಮರ್ಥ್ಯಕ್ಕೆ ಮನಸೋತಿರುವ ಅವರು ‘ರಿಪ್ಡ್’ ಎಂದು ಬರೆದುಕೊಂಡಿದ್ದಾರೆ.