ಆರಂಭದಲ್ಲೇ ಐಪಿಎಲ್ ಮೇಲೆ ಕೊರೊನಾ ಕರಿನೆರಳು: ಮೆಗಾ ಹರಾಜು ಸ್ಥಳ ಶಿಫ್ಟ್ ಸಾಧ್ಯತೆ

Promotion

ಬೆಂಗಳೂರು, ಜನವರಿ 06, 2022 (www.justkannada.in): ಐಪಿಎಲ್ ಮೆಗಾ ಹರಾಜನ್ನು ಬೇರೆ ಕಡೆ ಶಿಫ್ಟ್ ಮಾಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಿನ ಈಗಾಗಲೇ ಕೊರೋನಾ ಸುರಕ್ಷತಾ ನಿಯಮಾವಳಿ ಜಾರಿಯಲ್ಲಿದೆ. ಹೀಗಾಗಿ ಐಪಿಎಲ್ ಮೆಗಾ ಹರಾಜನ್ನು ಬೇರೆ ಕಡೆ ಶಿಫ್ಟ್ ಆಗುವ ಸಾಧ್ಯತೆ ಇದೆ.

ಹೌದು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಬೇಕಿತ್ತು. ಆದರೆ ಇತ್ತೀಚಿಗೆ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಹೀಗಾಗಿ ಹರಾಜು ಸ್ಥಳವನ್ನು ಬೇರೆ ಕಡೆ ಶಿಫ್ಟ್ ಮಾಡುವ ಸಾಧ್ಯತೆಯಿದೆ.

ಜತೆಗೆ 3ನೇ ಅಲೆ ಹೆಚ್ಚಾದರೆ ಮತ್ತೆ ಮುಂದಿನ ಸೀಸನ್ ಗೆ ಐಪಿಎಲ್ ಮೇಲೆ ಕರಿನೆರಳು ಬೀರುವ ಸಾಧ್ಯತೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.