ಐಪಿಎಲ್: ಮುಂಬೈ-ಕೊಲ್ಕತಾ ಫೈಟ್, ಯಾರಿಗೆ ಸಿಹಿ? ಯಾರಿಗೆ ಕಹಿ?

Promotion

ಬೆಂಗಳೂರು, ಏಪ್ರಿಲ್ 13, 2021 (www.justkannada.in): ಮೊದಲ ಪಂದ್ಯದಲ್ಲಿ ಸೋತ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ಹೈದರಾಬಾದ್‌ ವಿರುದ್ಧ ಗೆದ್ದಿದ್ದ ಕೋಲ್ಕತಾ ನೈಟ್‌ರೈಡರ್ ಇಂದು 2ನೇ ಪಂದ್ಯದಲ್ಲಿ ಗೆಲುವಿಗಾಗಿ ಪೈಪೋಟಿ ನಡೆಸಲಿವೆ.

ಎಲ್ಲ ಸೀಸನ್ ಆರಂಭದ ಕೆಲವು ಪಂದ್ಯಗಳನ್ನು ಸೋಲುತ್ತ ಹೋಗುವುದು ಮುಂಬೈಗೊಂದು ಹವ್ಯಾಸವಾಗಿದೆ. ಹೀಗಾಗಿ ರೋಹಿತ್‌ ಪಡೆಯನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ.

ಈ ಹಿಂದೆ ಮುಂಬೈ ವಿರುದ್ಧ ಆಡಿದ 27 ಪಂದ್ಯಗಳಲ್ಲಿ ಕೆಕೆಆರ್‌ಗೆ ಗೆಲ್ಲಲು ಸಾಧ್ಯವಾಗಿಲ್ಲ. ಗೆದ್ದಿರುವುದು ಕೇವಲ ಆರರಲ್ಲಿ ಮಾತ್ರ. ಕಳೆದ ಯುಎಇ ಕೂಟದ ಎರಡೂ ಪಂದ್ಯಗಳಲ್ಲಿ ಕೋಲ್ಕತಾ ಮುಂಬೈಗೆ ಶರಣಾಗಿತ್ತು.
ಹೀಗಾಗಿ ಈ ಪಂದ್ಯದಲ್ಲಿ ಮುಂಬೈ ಪುಟಿದೇಳುವ ಉತ್ಸಾಹದಲ್ಲಿದೆ.