ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರನ್ನ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು- ಸಚಿವ ಕೆ. ಗೋಪಾಲಯ್ಯ..

ಬೆಂಗಳೂರು,ಸೆಪ್ಟಂಬರ್,12,2020(www.justkannada.in): ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಬುಡ ಸಮೇತ ಕಿತ್ತು ಹಾಕಬೇಕು. ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ, ಗೋಪಾಲಯ್ಯ ತಿಳಿಸಿದರು.jk-logo-justkannada-logo

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಬೆಂಗಳೂರು ಉತ್ತರ ಬಿಜೆಪಿ ಯುವ ಮೋರ್ಚಾ ಘಟಕದಿಂದ  “ಡ್ರಗ್ ಮುಕ್ತ ಕರ್ನಾಟಕ  ಸಹಿ ಅಭಿಯಾನ” ವನ್ನು ನಗರದ ಒರಿಯನ್ ಮಾಲ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಅಭಿಯಾನದಲ್ಲಿ ಸ್ಥಳೀಯ ಶಾಸಕರು ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ, ಗೋಪಾಲಯ್ಯ ಪಾಲ್ಗೊಂಡು ಮಾತನಾಡಿದರು. ಸಮಾಜಕ್ಕೆ ಕಂಟಕವಾಗಿ ಕಾಡುತ್ತಿರುವ ಡ್ರಗ್ಸ್ ಮಾಫಿಯಾ ವನ್ನ ರಾಜ್ಯದಲ್ಲಿ ಬುಡ ಸಮೇತ ಕಿತ್ತು ಹಾಕಿ. ಇದರಲ್ಲಿ ಯಾರ್ಯಾರು ಇದ್ದಾರೆ ಅಂತವರನ್ನ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ಡ್ರಗ್ಸ್ ಮಾಫಿಯಾ ದೇಶದ ಬೆನ್ನೆಲುಬಾದ ಯುವ ಸಮುದಾಯದ ಭವಿಷ್ಯವನ್ನು ಹಾಳು ಮಾಡಿದ್ದಲ್ಲದೇ ಲಕ್ಷಾಂತರ ಮಂದಿ ಯುವಕರು ಬಲಿಯಾಗಿ ದೇಶಕ್ಕೆ ಹಾಗೂ ರಾಜ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಬಿಎಂಪಿಯ ಮಾಜಿ ಉಪ ಮಹಾಪೌರರಾದ ಎಸ್ ಹರೀಶ್, ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಮಂಡಲ ಅಧ್ಯಕ್ಷ ರಾದ ರಾಘವೇಂದ್ರ ಶೆಟ್ಟಿ, ಪಾಲಿಕೆ ಮಾಜಿ ಸದಸ್ಯ ಕೆ ವಿ ರಾಜೇಂದ್ರ ಕುಮಾರ್, ಬೆಂಗಳೂರು ಉತ್ತರ ಬಿಜೆಪಿ ಯ ಉಪಾಧ್ಯಕ್ಷರಾದ ಎನ್ ಜಯರಾಮ್ ಕೆ ಬಿ ವೆಂಕಟೇಶ್ ಮೂರ್ತಿ, ಯುವ ಮೋರ್ಚಾ ಮುಖಂಡರಾದ ಭರತ ಕುಮಾರ್,ಮಹಿಳಾ ಯುವ ಮೋರ್ಚಾ ದ ಕವಿತಾ ಪ್ರಭಾವತಿ ಸೇರಿದಂತೆ ಹಲವು ಮುಖಂಡರುಗಳು, ಕಾರ್ಯಕರ್ತರು ಭಾಗಹಿಸಿದ್ದರು.

Key words:  involved -drugs – punished – Bangalore-Minister K, Gopalaiah