ಮಂಡ್ಯದಿಂದ ಸ್ಪರ್ಧಿಸುವಂತೆ ಮಾಜಿ ಸಿಎಂ ಹೆಚ್.ಡಿಕೆಗೆ ಆಹ್ವಾನ.

Promotion

ಮಂಡ್ಯ,ಜನವರಿ,25,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಈ ಮಧ್ಯೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಆಹ್ವಾನ ಬಂದಿದೆ.

ಮಂಡ್ಯ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಈ ಆಹ್ವಾನ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಶಾಸಕ ಎಂ.ಶ್ರೀನಿವಾಸ್,  ಮಂಡ್ಯದಿಂದ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧಿಸಿದರೇ ಸ್ವಾಗತ.  ಮಂಡ್ಯಕ್ಕೆ  ಹೆಚ್ ಡಿಕೆ  ಬಂದ್ರೆ ಇನ್ನಷ್ಟು ಅಭಿವೃದ್ದಿಯಾಗಲಿದೆ.  ಮಂಡ್ಯದಿಂದ ಹೆಚ್.ಡಿಕೆ  ಸ್ಪರ್ಧಿಸಿದರೆ ಪ್ರಚಾರ ಮಾಡುತ್ತೇನೆ ಎಂದರು.

ಕಳೆದ ಬಾರಿ ನಾನು 25 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೆ. ಈ ಬಾರಿ ಹೆಚ್.ಡಿಕೆ  50 ಸಾವಿರ ಅಂತರದಿಂದ ಗೆಲ್ತಾರೆ. ಯಾರು ಏನೇ ಷಡ್ಯಂತ್ರ ಮಾಡಿದರೂ ಹೆಚ್.ಡಿ ಕುಮಾರಸ್ವಾಮಿ ಗೆಲುವು ಸಾಧಿಸುತ್ತಾರೆ. ಎದುರಾಳಿ ಯಾರೇ ಇದ್ದರೂ ಹೆಚ್.ಡಿಕೆ ಗೆಲ್ತಾರೆ. ಹೆಚ್.ಡಿಕೆ ಮಂಡ್ಯಕ್ಕೆ  ಬಂದ್ರೆ ಕಾರ್ಯಕರ್ತರಿಗೆ ಮತ್ತಷ್ಟು ಹುಮ್ಮಸ್ಸು ಬರುತ್ತೆ. ಕುಮಾರಸ್ವಾಮಿ ಸ್ಪರ್ಧಿಸಿದರೇ ನಾನು ಕ್ಷೇತ್ರ ತ್ಯಾಗಕ್ಕೂ ಸಿದ್ಧ ಎಂದು ಶಾಸಕ ಎಂ.ಶ್ರೀನಿವಾಸ್ ನುಡಿದರು.

Key words: Invitation – former CM –HD Kumaraswamy- contest – Mandya.