ಜ.20 ರಿಂದ ಮೂರು – ದಿನಗಳ ಕಾಲ ಅಂತಾರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ವಾಣಿಜ್ಯ ಮೇಳ.

Promotion

ಬೆಂಗಳೂರು, ನವೆಂಬರ್ 24,2022(www.justkananda.in): ರಾಜ್ಯದ ಸಾವಯವ ಮತ್ತು ಸಿರಿಧಾನ್ಯಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವ ಸದುದ್ದೇಶದೊಂದಿಗೆ ನಗರದ ಬೆಂಗಳೂರು ಅರಮನೆ ಮೈದಾನದಲ್ಲಿ ಜನವರಿ 20 ರಿಂದ 22 ರ ವರೆಗೆ ಮೂರು – ದಿನಗಳ ಅಂತಾರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ವಾಣಿಜ್ಯ ಮೇಳವನ್ನು ರಾಜ್ಯ ಕೃಷಿ ಇಲಾಖೆ ಆಯೋಜಿಸಲಿದೆ.

ಗುಣಮಟ್ಟದ ವಸ್ತು ಪ್ರದರ್ಶನ ಮಳಿಗೆಗಳು, ರಾಷ್ಟ್ರೀಯ ಸಮ್ಮೇಳನಗಳು, ಉತ್ಪಾದಕರ ಮತ್ತು ಮಾರುಕಟ್ಟೆದಾರರ ಸಭೆಗಳು, ರೈತರ ಕಾರ್ಯಾಗಾರಗಳು, ಸಾವಯವ ಆಹಾರ ಮಳಿಗೆಗಳು, ಬಳಕೆದಾರರೊಂದಿಗೆ ಸಂಪರ್ಕ ಒಳಗೊಂಡಂತೆ ಸಾವಯವ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳು ಈ ಮೇಳದಲ್ಲಿ ಇರುತ್ತವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Key words: International -Organic – Cereals- Trade –Fair-anuary 20- three-day