ಸಂಗೊಳ್ಳಿ ರಾಯಣ್ಣನಿಗೆ ಅಪಮಾನಿಸಿದವರಿಗೆ ಪೊಲೀಸ್ ಭಾಷೆಯಲ್ಲಿ ಶಿಕ್ಷೆಯಾಗಬೇಕು – ಬಿಜೆಪಿ ಶಾಸಕ ರಾಜೂಗೌಡ ಆಗ್ರಹ.

Promotion

ಬೆಳಗಾವಿ,ಡಿಸೆಂಬರ್,24,2021(www.justkannada.in):  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಅಪಮಾನಿಸಿ ಪುಂಡಾಟ ಮೆರೆದ ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಡಿಸೆಂಬರ್ 31ಕ್ಕೆ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಬಿಜೆಪಿ ಶಾಸಕ ರಾಜೂಗೌಡ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಶಾಸಕ ರಾಜೂಗೌಡ, ಶಿವಾಜಿ, ಸಂಗೊಳ್ಳಿ ರಾಯಣ್ಣ ಭಾರತಾಂಬೆಯ ಮಕ್ಕಳು.  ರಾಯಣ್ಣ ದೇಶಕ್ಕಾಗಿ ಹೋರಾಡಿದ ವ್ಯಕ್ತಿ ಶಿವಾಜಿ ಹಿಂದೂ ಧರ್ಮ ಕಟ್ಟಿದರು. ಇವರಿಗೆ ಅಪಮಾನಿಸಿವುದು ಎಷ್ಟು ಸರಿ. ಅಪಮಾನಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕನ್ನಡ ಭಾಷೆಗೆ ಅಪಮಾನಿಸಿದವರಿಗೆ ಶಿಕ್ಷೆಯಾಗಬೇಕು ರಾಯಣ್ಣನ ಅಪಮಾನಿಸಿದವರಿಗೆ ಪೊಲೀಸ್ ಭಾಷೆಯಲ್ಲಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಎಂಇಎಸ್ ಪುಂಡರಿಗೆ ಸಿಎಂ ಗೃಹ ಸಚಿವರು ತಕ್ಕ ಪಾಠ ಕಲಿಸುತ್ತಾರೆ. ಪುಂಡರಿಗೆ ತಕ್ಕ ಶಿಕ್ಷೆಯಾಗುತ್ತೆ. ಎಂಇಎಸ್ ಬ್ಯಾನ್ ಮಾಡೋಕೆ ಬರುತ್ತೊ ಇಲ್ವೋ ಕನ್ನಡ ಭಾಷೆಗೆ ಅಪಮಾನ ಮಾಡಿದವರಿಗೆ ಶೀಕ್ಷೆಯಾಗಬೇಕು ಎಂದರು.

Key words: insulted-sangolli Rayanna – punished –police- language-BJP MLA- Raju Gowda