ಪಾದಯಾತ್ರೆ ತಡೆಯಲು ಡಿಸಿ ಮತ್ತು ಎಸ್ಪಿಗೆ ಸೂಚನೆ- ಗೃಹಸಚಿವ ಅರಗ ಜ್ಞಾನೇಂದ್ರ.

Promotion

ಬೆಂಗಳೂರು,ಜನವರಿ,13,2022(www.justkannada.in):  ಕಾಂಗ್ರೆಸ್ ಪಾದಯಾತ್ರೆ ತಡೆಯುವಂತೆ ಜಿಲ್ಲಾಧಿಕಾರಿ ಹಾಗೂ ರಾಮನಗರ ಎಸ್ಪಿಗೆ ಸೂಚನೆ ನೀಡಿದ್ದೇನೆ. ಅವರೇ ಪಾದಯಾತ್ರೆ ನಿಲ್ಲಿಸುತ್ತಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಈ ಕುರಿತು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಲೇ ಇದೆ.  . ಪಾದಯಾತ್ರೆ ತಡೆಯಲು ಡಿಸಿ ಎಸ್ ಪಿಗೆ ಸೂಚನೆ ನೀಡಲಾಗಿದೆ.  ಕೈ ನಾಯಕರು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿ. ಪಾದಯಾತ್ರೆ ನಿಲ್ಲಿಸದಿದ್ರೆ ಕಾನೂನು ಪ್ರಕಾರ ಪಾದಯಾತ್ರೆ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.  ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಲೇ ಇದೆ. ಬಡವರು ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ,. ಹೇಗೆ ಜೀವನ ನಡೆಸೋದು ಎಂದು ಕಷ್ಟಪಡುತ್ತಿದ್ದಾರೆ.   ಪಾದಯಾತ್ರೆ ಜತೆಗೆ ಕೋವಿಡ್ ಹರಡುವ ಯಾತ್ರೆ ಇದು. ಯಾರ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಮೇಕೆದಾಟು ಯೋಜನೆ ಯಾವ ಪಕ್ಷವೂ ವಿರೋಧಿಸಿಲ್ಲ. ಈ ಯೋಜನೆ ಬಗ್ಗೆ ಕಾಂಗ್ರೆಸ್ ಗೆ ಬದ್ಧತೆ ಇಲ್ಲ ಎಂದು ಅರಗ ಜ್ಞಾನೇಂದ್ರ ಕಿಡಿಕಾರಿದರು.

Key words: Instruct-DC – SP – stop –padayatra-Home Minister- Arag Gnanendra