ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗಿ ದಾಖಲೆ ಬರೆದ ಭಾರತೀಯ ನೌಕಾಪಡೆ ಅಥ್ಲಿಟ್

Promotion

ಬೆಂಗಳೂರು ಜುಲೈ 02, 2021 (www.justkannada.in): ಭಾರತೀಯ ನೌಕಾಪಡೆಯ ಅಥ್ಲೀಟ್‌ ಆಗಿರುವ ಎಂಪಿ ಜಾಬಿರ್‌ 400 ಮೀ. ಹರ್ಡಲ್ಸ್‌ ನಲ್ಲಿ ಟೋಕಿಯೋ ಒಲಿಂಪಿಕ್ಸ್‌ ಗೆ ಆಯ್ಕೆಯಾಗಿದ್ದಾರೆ.

ಪಟಿಯಾಲದಲ್ಲಿ ನಡೆದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ ನಲ್ಲಿ ಭಾಗವಹಿಸಿದ್ದ ಜಾಬಿರ್‌ 49.78 ಸೆಂಕೆಂಡ್‌ ಗಳಲ್ಲಿ ಗುರಿ ತಲುಪಿದ್ದಾರೆ. ಮೂಲತಃ ಕೇರಳದ ಮಲಪ್ಪುರಂ ಜಿಲ್ಲೆಯವರಾದ ಜಾಬಿರ್‌ ಭಾರತೀಯ ನೌಕಾ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ ಅನ್ನು ಪೂರ್ತಿಗೊಳಿಸಿದರೆ 400ಮೀ. ಹರ್ಡಲ್ಸ್‌ ವಿಭಾಗದಲ್ಲಿ ಒಲಿಂಪಿಕ್ಸ್‌ ನಲ್ಲಿ ಭಾಗವಹಿಸಿದ ಪ್ರಥಮ ಪುರುಷ ಕ್ರೀಡಾಪಟು ಎಂಬ ದಾಖಲೆಯನ್ನು ಜಾಬಿರ್‌ ತಮ್ಮ ಹೆಸರಿನಲ್ಲಿ ಬರೆಯಲಿದ್ದಾರೆ.