ನಟಿ ವಿದ್ಯಾ ಬಾಲನ್’ಗೆ ಭಾರತೀಯ ಸೇನೆ ಗೌರವ

Promotion

ಬೆಂಗಳೂರು, ಜುಲೈ 06, 2021 (www.justkannada.in): ಕಾಶ್ಮೀರದ ಗುಲ್ಮಾರ್ಗ್ನಲ್ಲಿರುವ ಮಿಲಟರಿ ಫೈರಿಂಗ್ ರೇಂಜ್‌ಗೆ (ಸೈನಿಕರು ಫೈರಿಂಗ್ ತರಬೇತಿ ಪಡೆಯುವ ಸ್ಥಳ) ವಿದ್ಯಾ ಬಾಲನ್ ಹೆಸರು ನಾಮಕರಣ ಮಾಡಲಾಗಿದೆ.

ಭಾರತೀಯ ಚಿತ್ರರಂಗಕ್ಕೆ ವಿದ್ಯಾ ಬಾಲನ್ ನೀಡಿರುವ ಕೊಡುಗೆ ಗೌರವಿಸಿ ಭಾರತೀಯ ಸೇನೆ ಈ ಗೌರವ ನೀಡಿದೆ.

ಅಂದಹಾಗೆ ಈ ವರ್ಷದ ಆರಂಭದಲ್ಲಿ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಆಯೋಜಿಸಿದ್ದ ‘ಗುಲ್ಮಾರ್ಗ್ ವಿಂಟರ್ ಫೆಸ್ಟಿವಲ್’ನಲ್ಲಿ ವಿದ್ಯಾ ಬಾಲನ್ ಭಾಗವಹಿಸಿದ್ದರು.

ಜತೆಗೆ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದ್ದ ‘ಶೆರ್ನಿ’ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಶಸ್ವಿ ಪ್ರದರ್ಶನ ಕಾಣ್ತಿದೆ.