ಭಾರತ-ಬಾಂಗ್ಲಾ ಏಕದಿನ ಪಂದ್ಯ:  ಚೊಚ್ಚಲ ದ್ವಿಶತಕ ಸಿಡಿಸಿದ ಇಶಾನ್ ಕಿಶನ್: ವಿರಾಟ್ ಕೊಹ್ಲಿಯಿಂದ ಸೆಂಚುರಿ.

Promotion

ಬಾಂಗ್ಲಾದೇಶ, ಡಿಸೆಂಬರ್,10,2022(www.justkannada.in):  ಬಾಂಗ್ಲಾದೇಶದ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ನಡೆಸಿದ್ದು ಯುವ ಆಟಗಾರ ಇಶಾನ್ ಕಿಶನ್ ದ್ವಿಶತಕ ಸಿಡಿಸಿ ಮಿಂಚಿದರೇ   ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

ಕಳೆದ ಎರಡು ಪಂದ್ಯಗಳಲ್ಲಿ ಸೋತು ಸರಣಿ ಕೈಚೆಲ್ಲಿರುವ ಟೀಂ ಇಂಡಿಯಾ ಇಂದು 3ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿತು . ಆದರೆ ಆರಂಭಿಕ ಆಟಗಾರ ಶಿಖರ್ ಧವನ್ 3 ರನ್ ಗೆ ವಿಕೆಟ್ ಒಪ್ಪಿಸಿದರು. ನಂತರ ಇಶಾನ್ ಕಿಶನ್ ಜೊತೆಯಾದ ವಿರಾಟ್ ಕೊಹ್ಲಿ ಭರ್ಜರಿ ಇನ್ನಿಂಗ್ಸ್ ಕಟ್ಟಿದರು.

ಬಾಂಗ್ಲಾ ಬೌಲರ್ ಗಳನ್ನ ಮನ ಬಂದಂತೆ ದಂಡಿಸಿದ ಇಶಾನ್ ಕಿಶನ್ ತಮ್ಮ ಮೊದಲ ದ್ವಿಶತಕವನ್ನ ಪೂರೈಸಿದರು. 131 ಬಾಲ್  ನಲ್ಲಿ 24 ಬೌಂಡರಿ ಮತ್ತು 10 ಭರ್ಜರಿ ಸಿಕ್ಸ್ ಗಳೊಂದಿಗೆ 210 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ನಂತರ ವಿರಾಟ್ ಕೊಹ್ಲಿ ಸಹ ಶತಕ ಸಿಡಿಸಿದ್ದು ಸದ್ಯ 89 ಬಾಲ್ ಗಳಲ್ಲಿ 112 ರನ್ ಗಳಿಸಿದ್ದಾರೆ.

Key words:  India-Bangladesh- ODI- Ishan Kishan – double century- Century – Virat Kohli.